Realme GT 7 Pro: ಗೇಮಿಂಗ್ ಪ್ರಿಯರಿಗೆ ಸಿಹಿಸುದ್ದಿ!. ರಿಯಲ್ಮಿಯಿಂದ ಗೇಮಿಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದೆ. ಇದರ ಹೆಸರು 'ರಿಯಲ್‌ಮಿ ಜಿಟಿ 7 ಪ್ರೊ'. ಕ್ವಾಲ್ಕಾಮ್ ಹೊಸದಾಗಿ ಬಿಡುಗಡೆ ಮಾಡಿದ ಸ್ನಾಪ್ಡ್ರಾಗನ್ 8 ಎಲೈಟ್ ಶಕ್ತಿಶಾಲಿ ಪ್ರೊಸೆಸರ್ ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಈ ಚಿಪ್ ಸೆಟ್‌ನೊಂದಿಗೆ ಬರುವ ಮೊದಲ ಪ್ರಮುಖ ಸ್ಮಾರ್ಟ್‌ಫೋನ್ ಇದೆಂದು ರಿಯಲ್‌ಮಿ ಹೇಳಿಕೊಂಡಿದೆ.
AI ಸ್ಕೆಚ್, ಸಮ್ಮರಿ, ಸ್ಪೀಕ್, ರೈಟರ್, ಬೆಸ್ಟ್ ಫೇಸ್ನಂತಹ ಎಐ ಫೀಚರ್ಗಳು ಇದರಲ್ಲಿ ಅಡಕವಾಗಿವೆ. ಇದಲ್ಲದೇ ಖರೀದಿಗೆ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಗೇಮಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ಈ ಫೋನ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ಕೊಡುಗೆಗಳ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ.
Realme GT 7 Pro ವಿಶೇಷತೆಗಳು:
ಡಿಸ್ಪ್ಲೇ: 6.78 ಇಂಚಿನ ಕ್ವಾಡ್ ಕರ್ವ್ಡ್ AMOLED
ಪ್ರೊಸೆಸರ್: ಸ್ನಾಪ್ಡ್ರಾಗನ್ 8 ಎಲೈಟ್
ರಿಫ್ರೆಶ್ ರೇಟ್: 120Hz
ಬ್ರೈಟ್ನೆಸ್: 6500 ನಿಟ್ಸ್
ಬ್ಯಾಟರಿ: 5,800 mAh
120W ಸ್ಪೀಡ್ ಚಾರ್ಜಿಂಗ್
ರಿಯರ್ ಕ್ಯಾಮೆರಾ: 50 MP
ಫ್ರಂಟ್ ಕ್ಯಾಮೆರಾ: 16 MP
ಟೆಲಿಫೋಟೋ ಲೆನ್ಸ್: 50 MP
ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ: 8 MP
ಕಲರ್ ಆಪ್ಷನ್:
ಮಾರ್ಸ್ ಆರೆಂಜ್
ಗ್ಯಾಲಕ್ಸಿ ಗ್ರೇ
Realme GT 7 Pro ವೆರಿಯಂಟ್ಸ್: ಇದು ಎರಡು ರೂಪಾಂತರಗಳಲ್ಲಿ ಲಭ್ಯ.
12GB+ 256GB ರೂಪಾಂತರ
16GB+ 512GB ರೂಪಾಂತರ
ಬೆಲೆ:
12GB+ 256GB ರೂಪಾಂತರ ಬೆಲೆ: ರೂ.59,999.
16GB+ 512GB ರೂಪಾಂತರ ಬೆಲೆ: ರೂ.65,999.
ಯಾವಾಗ ಲಭ್ಯ?: ಅಮೆಜಾನ್ ಮತ್ತು ಕಂಪನಿಯ ವೆಬ್‌ಸೈಟ್‌ನಿಂದ ನವೆಂಬರ್ 29ರಿಂದ ಇವುಗಳ ಮಾರಾಟ ಪ್ರಾರಂಭ. 'GT 7 Pro' ಫೋನ್ Android 15 ಆಧರಿತ Realme UI 6.0ನಲ್ಲಿ ಕಾರ್ಯನಿರ್ವಹಿಸುತ್ತದೆ. ಕೇವಲ 30 ನಿಮಿಷಗಳಲ್ಲಿ 1ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ರಿಯಲ್‌ಮಿ ತಿಳಿಸಿದೆ.
ಆಫರ್‌ಗಳು!: ಈ ಹೊಸ ಫೋನ್ ಆಯ್ದ ಕಾರ್ಡ್‌ಗಳ ಪರಿಚಯಾತ್ಮಕ ಕೊಡುಗೆಯ ಅಡಿಯಲ್ಲಿ ರೂ. 3,000ವರೆಗೆ ರಿಯಾಯಿತಿ ನೀಡುವುದಾಗಿ ಕಂಪನಿ ತಿಳಿಸಿದೆ. ಜೊತೆಗೆ, ಮೂರು ವರ್ಷಗಳ ಸಾಫ್ಟ್‌ವೇರ್ ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್ಡೇಟ್ಗಳನ್ನು ಸಹ ಒದಗಿಸಲಾಗುತ್ತದೆ.
ಇದನ್ನೂ ಓದಿ: Olaದಿಂದ ಎರಡು ಹೊಸ ಇ-ಸ್ಕೂಟರ್ ಲಾಂಚ್; ₹40 ಸಾವಿರದಿಂದ ಬೆಲೆ ಪ್ರಾರಂಭ