ETV Bharat / state

ಕಾಂಗ್ರೆಸ್​ ಪೋಸ್ಟರ್ ಹರಿದರೆ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ: ಸಿದ್ದು ವಾರ್ನಿಂಗ್ - ಸಿದ್ದರಾಮಯ್ಯ ವಾರ್ನಿಂಗ್

ರಾಹುಲ್ ಗಾಂಧಿ ಎದುರು ಬಿಜೆಪಿ, ಪೊಲೀಸ್​ನವರಿಗೆ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟರು. ಕಾಂಗ್ರೆಸ್​ ನಾಯಕರ ಪೋಸ್ಟರ್ ಹರಿದಿರುವುದರ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಇದೇ ರೀತಿ ಮುಂದುವರೆದರೆ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ ಎಂದು ಎಚ್ಚರಿಸಿದರು.

siddaramaiah
ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್
author img

By

Published : Sep 30, 2022, 2:05 PM IST

ಚಾಮರಾಜನಗರ: ಕಾಂಗ್ರೆಸ್ ಪೋಸ್ಟರ್​ಗಳನ್ನು ಹರಿಯುವ ರಾಜಕಾರಣ ಮಾಡಿದ್ರೆ ಬಿಜೆಪಿ ನಾಯಕರುಗಳು ಯಾರೂ ತಿರುಗಾಡದಂತೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟರು.

ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ಪೋಸ್ಟರ್ ಹರಿದಿರುವುದರ ಬಗ್ಗೆ ಆಕ್ರೋಶ ಹೊರಹಾಕಿದರು. ಜೊತೆಗೆ ಇದೇ ರೀತಿ ಮುಂದುವರಿದರೆ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್

ಕೆಲ ಪೊಲೀಸ್​ನವರು ಕೂಡ ಬಿಜೆಪಿಗರ ಜೊತೆ ಶಾಮೀಲರಾಗಿದ್ದೀರಿ. ಇನ್ನು 6 ತಿಂಗಳು ಅಷ್ಟೇ, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಾವ ಶಕ್ತಿಯಿಂದಲೂ ಭಾರತ್​ ಜೋಡೋ ಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ: ರಾಗಾ ಗುಡುಗು

ಕೇರಳ ಮತ್ತು ತಮಿಳುನಾಡಿನಲ್ಲಿ ಯಾತ್ರೆ ಮುಗಿಸಿ ಕರ್ನಾಟಕದ ಗುಂಡ್ಲುಪೇಟೆ ಮೂಲಕ ಪಾದಯಾತ್ರೆ ಮುಂದುವರೆಯುತ್ತಿದ್ದು, ಎಂಟು ಜಿಲ್ಲೆಗಳಲ್ಲಿ 510 ಕಿ.ಮೀ ಸಾಗಲಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿ ಇಷ್ಟೊಂದು ದೂರದ ಪಾದಯಾತ್ರೆ ಮಾಡುತ್ತಿರುವುದು. ಬೇರೆ ಯಾವ ಪಕ್ಷಗಳ ನಾಯಕರು ಕೂಡ ಮಾಡಿಲ್ಲ ಎಂದರು.

ಕೋಮುವಾದ, ದ್ವೇಷ ರಾಜಕಾರಣದಿಂದ ರಾಜ್ಯ ಹಾಗೂ ರಾಷ್ಟ್ರವನ್ನು ರಕ್ಷಿಸಬೇಕಿದೆ. ರೈತರು, ಮಹಿಳೆಯರು ಆತಂಕದಿಂದ ಬದುಕುತ್ತಿದ್ದಾರೆ. ಶೇ 40 ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಗೌರವ ಇಟ್ಟಿಲ್ಲ, ಏಕ ವ್ಯಕ್ತಿ ಮೇಲೆ ನಿಂತಿದ್ದು, ಸಂವಿಧಾನ ವಿರೋಧಿಗಳು ಎಂದು ಹರಿಹಾಯ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.