ಚಾಮರಾಜನಗರ : ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಡಬಲ್ ಗೇಮ್ ಆಡ್ತಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಡಬಲ್ ಗೇಮ್ ಆಡುತ್ತಿಲ್ಲ ಎನ್ನಬಹುದು, ಆದರೆ ಹೊರನೋಟಕ್ಕೆ ಗೊತ್ತಾಗುತ್ತಿದೆ. ಅವರು ತೊಟ್ಟಿಲು ತೂಗಿ ಕೂಸು ಚಿವುಟುತಿದ್ದಾರೆ. ಬೇರೆಯವರು ಸಿಎಂ ಆಗುವುದನ್ನು ಸಿದ್ದರಾಮಯ್ಯ ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಅವಕಾಶ ಕೊಡುವುದಿಲ್ಲ, ಸರ್ಕಾರ ರಚನೆ ಮಾಡೇ ಮಾಡುತ್ತೇವೆ ಇದು ಬಿಜೆಪಿಯ ನಿಲುವು ಎಂದರು. ರಾಜ್ಯದ ಆಡಳಿತ ಅತಂತ್ರವಾಗಿದೆ, ದೋಸ್ತಿ ಸರ್ಕಾರದಲ್ಲಿ ಅತೃಪ್ತಿ ಜಾಸ್ತಿಯಾಗಿದ್ದು ಮೈತ್ರಿ ಶಾಸಕರು ಪಕ್ಷ ಬಿಟ್ಟು ಹೊರ ಬರುತ್ತಿದ್ದಾರೆ. ರೆಸಾರ್ಟ್, ಹೋಟೆಲ್ಗಳಿಗೆ ಹೋಗುವುದರಲ್ಲಿ ಸಮಯ ವ್ಯರ್ಥವಾಗುತ್ತಿದೆ ಎಂದು ವಿ.ಶ್ರೀ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ, ವಿಶ್ವನಾಥ್ ರಾಜಿನಾಮೆಯಲ್ಲಿ ತಮ್ಮ ಪಾತ್ರವಿಲ್ಲ ಎಂದೂ ಸ್ಪಷ್ಟಪಡಿಸಿದರು.