ಚಾಮರಾಜನಗರ: ಮಾದಪ್ಪನಿಗೆ ಕೈ ಮುಗಿದು ಇಡೀ ರಾಜ್ಯದ ಪೌರಕಾರ್ಮಿಕರಿಗೆ ಒಳ್ಳೆಯದಾಗಲಿ ಎಂದು ನಾನು ಬೇಡಿಕೊಂಡಿದ್ದೆ. ಆದರೆ, ಮಹದೇಶ್ವರ ಬೆಟ್ಟದ ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ(ಕೋಟೆ ಶಿವಣ್ಣ) ಕಿಡಿಕಾರಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಪೌರಕಾರ್ಮಿಕರ ಜೊತೆ ಸಂವಾದದಲ್ಲಿ ಅವರು ಮಾತನಾಡಿ, ಸಿಎಂ ಅವರೇ ಪ್ರಾಧಿಕಾರದ ಅಧ್ಯಕ್ಷರಾಗಿದ್ದರೂ ಅಲ್ಲಿನ ಅಧಿಕಾರಿಗಳು ಆರೋಗ್ಯ, ನಿವೇಶನ, ವೇತನ ಸಮಸ್ಯೆ ಬಗೆಬಹರಿಸದೇ ಇರುವುದು ನೋವಿನ ಸಂಗತಿ. ಸಿಎಂ ಅವರೊಟ್ಟಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಮಗನ ಅರೋಗ್ಯ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡ ಬೆಟ್ಟದ ಪೌರಕಾರ್ಮಿಕನಿಗೆ ಭರವಸೆ ನೀಡಿದರು.
ಇನ್ನು 13 ವರ್ಷದಿಂದ ಕೆಲಸ ಮಾಡಿದರೂ ಕಾಯಂ ಹುದ್ದೆ ನೀಡದಿದ್ದಕ್ಕೆ, ಪತಿ ಸತ್ತರೂ ಕೆಲಸ ನೀಡದ ರಾಮಸಮುದ್ರದ ಸರಸ್ವತಿ ಅವರ ಸಮಸ್ಯೆ ಕುರಿತು ಚಾಮರಾಜನಗರ ನಗರಸಭೆ ಆರೋಗ್ಯ ನಿರೀಕ್ಷಕ ಶರವಣಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದರು.
ಸುಪ್ರೀಂ ಕೋರ್ಟ್, ಹೈಕೋರ್ಟ್, ಹಲವು ಕಾಯ್ದೆಗಳು, ಕೇಂದ್ರದಲ್ಲೂ ಸಫಾಯಿ ಕರ್ಮಚಾರಿ ಆಯೋಗವಿದ್ದರೂ ಪೌರಕಾರ್ಮಿಕರು ಇನ್ನು ಗುಣಮಟ್ಟದ ಜೀವನ ಸಾಗಿಸುತ್ತಿಲ್ಲ, ನನ್ನ ಅಧಿಕಾರಾವಧಿಯಲ್ಲಿ ಪೌರಕಾರ್ಮಿಕರ ಜೀವನ ಸುಧಾರಿಸುವ ಕಾರ್ಯ ಮಾಡುತ್ತೇನೆ. ಪೌರಕಾರ್ಮಿಕರು ಕೂಡ ತಮಗೆ ಇರುವ ಸೌಲಭ್ಯಗಳ ಕುರಿತು ಅರಿವು ಹೊಂದಬೇಕು ಎಂದು ಆಶಿಸಿದರು.
ಓದಿ: 2ನೇ ಬಾರಿಗೆ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಸಚಿವ ಆನಂದಸಿಂಗ್ ನಾಂದಿ: ಶಾಸಕ ಗಾಲಿ ಸೋಮಶೇಖರರೆಡ್ಡಿ ವ್ಯಂಗ್ಯ