ETV Bharat / state

ರಂಗೇರಿದ ಚಾಮರಾಜನಗರ ಚುನಾವಣಾ ಅಖಾಡ: ಈ ಬಾರಿ ಕಣದಲ್ಲಿ ಅರ್ಚಕ, ಎಂಜಿನಿಯರ್, ಯೋಧ, ರೈತರು..! - ಘಟಾನುಘಟಿ ರಾಜಕೀಯ ನಾಯಕರು

ಚುನಾವಣೆಯಲ್ಲಿ ರಾಜಕೀಯ ನಾಯಕರ ಜೊತೆಗೆ ಅನೇಕ ಶ್ರೀ ಸಾಮಾನ್ಯರು ಕೂಡ ಕಣಕ್ಕೆ ಇಳಿಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಜನರು ಕೂಡ ಸಾಮಾನ್ಯರಿಗೆ ಆಶೀರ್ವಾದ ನೀಡಿ, ಗೆಲ್ಲಿಸಿದ ಉದಾಹರಣೆ ಕೂಡ ಇದೆ.

ChamarajaNagar assembly Election
ChamarajaNagar assembly Election
author img

By

Published : Feb 11, 2023, 4:41 PM IST

ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಒಂದು ಕಡೆ ಘಟಾನುಘಟಿ ರಾಜಕೀಯ ನಾಯಕರು ಚುನಾವಣಾ ಕಣಕ್ಕೆ ಇಳಿಯಲು ಸಿದ್ದತೆ ನಡೆಸಿದ್ದರೆ, ಮತ್ತೊಂದು ಕಡೆ ಸಾಮಾನ್ಯ ಜನರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ. ಈ ಬಾರಿ ಕೂಡ ಘಟಾನುಘಟಿ ನಾಯಕರ ನಡುವೆ ಅನೇಕ ಸಾಮಾನ್ಯ ಜನರು ಚುನಾವಣೆ ಎದುರಿಸಲಿದ್ದಾರೆ. ಯಾವುದೇ ಕ್ಷೇತ್ರ ಒಂದು ಪಕ್ಷದ ಭದ್ರಕೋಟೆ ಎಂಬ ಮಾನದಂಡಕ್ಕಿಂತ ಜನರು ತಮಗೂ ಒಂದು ಬಾರಿ ಅವಕಾಶ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ ನಿವೃತ್ತ ಯೋಧ, ಅರ್ಚಕ, ಎಂಜನಿಯರ್, ರೈತ ಮುಖಂಡರು, ಉದ್ಯಮಿಗಳು.

ಕೆಆರ್​​ಎಸ್ ನಿಂದ ಅರ್ಚಕ ಅಭ್ಯರ್ಥಿ: ಕರ್ನಾಟಕ ರಾಷ್ಟ್ರೀಯ ಸಮಿತಿ ಸ್ಥಾಪನೆಗೊಂಡ ಕೆಲವೇ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ ಜನರ ನಂಬಿಕೆ ಗಳಿಸುತ್ತಿದೆ. ಈ ಕೆಆರ್​​ಎಸ್​​ ಪಕ್ಷದಿಂದ ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸಶಾಸ್ತ್ರಿ ಅಭ್ಯರ್ಥಿ ಆಗುತ್ತಿದ್ದಾರೆ. ಕೊಳ್ಳೇಗಾಲದ ಮರಡಿಗುಡ್ಡದ ಅರ್ಚಕರಾಗಿರುವ ಶ್ರೀನಿವಾಸ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲು ಮುಂದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿ, ಜನರನ್ನು ಸೆಳೆಯುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕೆಆರ್​ಎಸ್​ ಪಕ್ಷ ಈ ಬಾರಿ ಚುನಾವಣಾ ರಾಜಕಾರಣದಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.

ಕೆಆರ್​​ಎಸ್ ಪಕ್ಷದ ಅಭ್ಯರ್ಥಿ
ಕೆಆರ್​​ಎಸ್ ಪಕ್ಷದ ಅಭ್ಯರ್ಥಿ

ರಾಜಕೀಯಕ್ಕಿಳಿದ ರೈತ ಮುಖಂಡರು: ನಿರಂತರ ಹೋರಾಟ, ರೈತ ಸಂಘದ ಸಂಘಟನೆಯಲ್ಲಿ‌ ತೊಡಗಿಸಿಕೊಂಡಿದ್ದ ಡಾ. ಗುರುಪ್ರಸಾದ್ ಚಾಮರಾಜನಗರದಿಂದ ಹಾಗೂ ಕಡಬೂರು ಮಂಜುನಾಥ್ ಗುಂಡ್ಲುಪೇಟೆ ಕ್ಷೇತ್ರದಿಂದ ಬೇರೆ ಬೇರೆ ಪಕ್ಷಗಳಡಿ ಸ್ಪರ್ಧಿಸಲು ಮುಂದಾಗಿದ್ದಾರೆ. ಡಾ.ಗುರುಪ್ರಸಾದ್ ಪಿಎಚ್​ಡಿ ಪದವೀಧರರಾಗಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ರೈತ ಹೋರಾಟದಲ್ಲಿ ಮುಂಚೂಣಿ ಹೆಸರನ್ನು ಪಡೆದಿದ್ದಾರೆ. ಎಎಪಿ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿಯಾಗಿದ್ದು, ಒಂದು ವೇಳೆ ರಾಜ್ಯ ರೈತ ಸಂಘವು ಸ್ವತಂತ್ರವಾಗಿ ಸ್ಪರ್ಧೆಗಿಳಿದರೇ ರೈತ ಸಂಘದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಪಕ್ಷ ಇನ್ನೂ ನಿರ್ಧರವಾಗದಿದ್ದರೂ ಸ್ಪರ್ಧಿಸುವುದು ಸ್ಪಷ್ಟವಾಗಿದೆ.

ಶ್ರೀ ಡಾ ಗುರು ಪ್ರಸಾದ್​ಸಾಮಾನ್ಯರು ಕೂಡ ಕಣ
ಡಾ ಗುರು ಪ್ರಸಾದ್​

ಕಡಬೂರು ಮಂಜುನಾಥ್ ಅವರು ಕೂಡ ರೈತ ಮುಖಂಡರಾಗಿದ್ದು ಆದರ್ಶದ ವಿವಾಹ ಮಾಡಿಕೊಂಡು ಗಮನ ಸೆಳೆದ ಯುವ ಮುಖಂಡರಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಹಣಾಹಣಿ ಎನ್ನುತ್ತಿದ್ದ ಗುಂಡ್ಲುಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದ ದಿಕ್ಕನ್ನು ಬದಲಿಸಿರುವ ಅಭ್ಯರ್ಥಿಯಾಗಿದ್ದಾರೆ.

ಕಡಬೂರು ಮಂಜುನಾಥ್​​
ಕಡಬೂರು ಮಂಜುನಾಥ್​​

ಎಲೆಕ್ಷನ್ ಗೆ ನಿಲ್ಲಿದ್ದಾರೆ ಎಂಜಿನಿಯರ್ : ಏರೋನಾಟಿಕಲ್ ಎಂಜಿನಿಯರ್ ಆಗಿರುವ ನಾಗೇಂದ್ರ ಎಂಬವರು ಹನೂರು ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಒಂದು ಹಂತದ ಪ್ರಚಾರ ಮುಗಿಸಿ ಎಎಪಿ ಮಾಡಿರುವ ಕಾರ್ಯಗಳ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಹಣ ಮತ್ತಿತ್ತರ ಆಸೆಗೆ ಬೀಳದೇ ವಿದ್ಯಾವಂತನಾದ ತನಗೆ ಒಂದು ಅವಕಾಶ ಕೊಡಬೇಕು ಎಂದು ಜನರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ.

ಗಂಗಾಧರ್​, ನಿವೃತ್ತ ಯೋಧ
ಗಂಗಾಧರ್​, ನಿವೃತ್ತ ಯೋಧ

ಆಗ ದೇಶಸೇವೆ ಈಗ ಜನಸೇವೆ: ಬರೋಬ್ಬರಿ 17 ವರ್ಷ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಗಂಗಾಧರ್ ಎಂಬ ನಿವೃತ್ತ ಯೋಧ ಹನೂರು ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಗಂಗಾಧರ್ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.

18 ವರ್ಷಗಳಿಂದ ಪಕ್ಷದಲ್ಲಿ ಇದ್ದಿದ್ದಕ್ಕೆ ಅವಕಾಶ: 18 ವರ್ಷಗಳಿಂದ ಪಕ್ಷದಲ್ಲಿದ್ದು ವಿವಿಧ ಜವಾಬ್ದಾರಿ ನಿರ್ವಹಿಸಿರುವ ಉದ್ಯಮಿ ಸೈಯದ್ ಅಕ್ರಂ ಅವರಿಗೆ ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್​ ಒಪ್ಪಿಗೆ ನೀಡಿದೆ. ಚಾಮರಾಜನಗರ ಜೆಡಿಎಸ್ ನ ಸಂಭಾವ್ಯ ಅಭ್ಯರ್ಥಿಯಾಗಿರುವ ಸೈಯದ್ ಅಕ್ರಂ ಅಖಾಡಕ್ಕೆ ಧುಮುಕಲು ಉತ್ಸುಕರಾಗಿದ್ದು, ತಮ್ಮದೇ ಆದ ಶೈಲಿಯಲ್ಲಿ ಜನರನ್ನು ತಲುಪಿ ಜೆಡಿಎಸ್ ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಶ್ರೀಸಾಮಾನ್ಯರೇ ಸ್ಪರ್ಧಿಸಿ ಬದಲಾವಣೆ ತರಲು ಪಣ ತೊಟ್ಟಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಈ ಪಟ್ಟಿ ಇನ್ನಷ್ಟು ಬೆಳೆಯುದಾದರೂ ವಿವಿಧ ರಂಗಗಳ ಈ ಶ್ರೀಸಾಮಾನ್ಯರು ಪ್ರಬಲ ಪೈಪೋಟಿ‌ ಕೊಡುವ ಹುರಿಯಾಳುಗಳಾಗಿದ್ದಾರೆ.

ಇದನ್ನೂ ಓದಿ: ಚುನಾವಣಾ ಪೂರ್ವ ತಯಾರಿ: ರಾಜ್ಯಕ್ಕೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ 3 ತಂಡ ಭೇಟಿ, ಪರಿಶೀಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.