ಚಾಮರಾಜನಗರ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಇಬ್ಬರು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡುವ ಮೂಲಕ ಚಾಮರಾಜನಗರದ ಸ್ಪಂದನ ಸ್ವಾಧಾರ ಕೇಂದ್ರ ಗಮನ ಸೆಳೆದಿದೆ.
17 ವರ್ಷದ ಅಪ್ರಾಪ್ತೆ ಹಾಗೂ ವಿಶೇಷ ಚೇತನ ಮಹಿಳೆಯೊಬ್ಬರು ನಗರದ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಇಬ್ಬರು ಈಗ 7 ತಿಂಗಳ ಗರ್ಭಿಣಿಯರಾಗಿದ್ದಾರೆ. ಕೂಲಿಗೆ ತೆರಳುತ್ತಿದ್ದ ವಿಶೇಷ ಚೇತನ ಮಹಿಳೆ ಜಮೀನು ಮಾಲೀಕನಿಂದಲೇ ಮೋಸಕ್ಕೊಳಗಾಗಿ, ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಹೆಣ್ಣಿಗೆ ತಾಯಿಯಾಗುವ ದಿನಗಳು ಸಂಭ್ರಮದ ಕಾಲವೇ ಸರಿ. ಆದರೆ, ಮೋಸಕ್ಕೆ ಬಲಿಯಾಗಿ, ಮನೆಯಿಂದ ದೂರವಾಗಿ ಸಂತ್ರಸ್ತರು ಸೀಮಂತ ಶಾಸ್ತ್ರವೆಂಬ ಸಡಗರ ಕಳೆದುಕೊಳ್ಳದಿರಲೆಂದು ಶಾಸ್ತ್ರ ಮಾಡಿದ್ದೇವೆ. ಭವಿಷ್ಯದಲ್ಲಿ ಅವರ ಬಾಳು ಸುಖಮಯವಾಗಿರಲೆಂದು ಹಾರೈಸಿದ್ದೇವೆ ಎಂದು ಸ್ವಾಧಾರ ಕೇಂದ್ರದವರು ಈಟಿವಿ ಭಾರತಕ್ಕೆ ತಿಳಿಸಿದರು.
ಇದನ್ನೂ ಓದಿ: ಚಿರತೆ ದಾಳಿಯಿಂದ ಸಾವು: ಎಫ್ಐಆರ್ ಯಾಕೆ ಗೊತ್ತಾ...?
ಸ್ವಾಧಾರ ಕೇಂದ್ರದ ಸಿಬ್ಬಂದಿಗಳು, ಕೇಂದ್ರದಲ್ಲಿ ಆಶ್ರಯ ಪಡೆದಿರುವವರು, ನೆರೆಹೊರೆಯ ಮುತ್ತೈದೆಯರು ಶುಕ್ರವಾರ ಇಬ್ಬರು ಗರ್ಭಿಣಿಯರಿಗೆ ಅರಿಶಿಣ-ಕುಂಕುಮ ಲೇಪಿಸಿ ಶುಭ ಹಾರೈಸಿ ಧೈರ್ಯ ತುಂಬಿದ್ದಾರೆ.