ಚಾಮರಾಜನಗರ: ಚಿರತೆಗಳು ಬರುತ್ತವೆ ಎಂದು ಕಿಡಿಗೇಡಿಗಳು ಎಡಬೆಟ್ಟಕ್ಕೆ ಎರಡು ಕಡೆ ಬೆಂಕಿಯಿಟ್ಟಿರುವ ಘಟನೆ ನಡೆದಿದೆ.
25ಕ್ಕೂ ಹೆಚ್ಚು ಎಕರೆಯಲ್ಲಿದ್ದ ಕುರುಚಲುಕಾಡು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಬಿಳಿಗಿರಿರಂಗನಬೆಟ್ಟದ ಚಾಮರಾಜನಗರ ಬಫರ್ ವಲಯದ 25 ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು, ಅರಣ್ಯ ಇಲಾಖೆ ವ್ಯಾಪ್ತಿಗೆ ಈ ಪ್ರದೇಶ ಒಳಪಡುವುದಿಲ್ಲ ಎಂದು ತಿಳಿದುಬಂದಿದ್ದು ಚಿರತೆ, ಕರಡಿ, ಜಿಂಕೆ ಹಾಗೂ ನವಿಲು ತಕ್ಕಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು ಬೆಂಕಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.