ETV Bharat / state

ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು - mandya and hubli school news

ಇಂದಿನಿಂದ ರಾಜ್ಯದಲ್ಲಿ ಶಾಲಾ-ಕಾಲೇಜಿನಲ್ಲಿ ಭೌತಿಕ ತರಗತಿ ಆರಂಭವಾಗಿದೆ. ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಮೊದಲ ಹಂತವಾಗಿ 9, 10, 11 ಮತ್ತು 12ನೇ ತರಗತಿಗಳಿಗೆ ಪಾಠ ನಡೆಸಲಾಗುತ್ತಿದೆ.

ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು
school Teachers who have welcomed students
author img

By

Published : Aug 23, 2021, 12:16 PM IST

ಹುಬ್ಬಳ್ಳಿ/ಮಂಡ್ಯ/ಚಾಮರಾಜನಗರ: ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಶಾಲೆಯತ್ತ ಆಗಮಿಸಿದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು.

ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಮಂಡ್ಯ ಶಿಕ್ಷಕರು:

ಸಕ್ಕರೆ ನಾಡಿನಲ್ಲಿ ಸಹ ಮಕ್ಕಳನ್ನು ಶಿಕ್ಷಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದರು.

ಭೌತಿಕ ತರಗತಿಗೆ ಆಗಮಿಸಿದ ವಿದ್ಯಾರ್ಥಿಗಳು

ಕೋವಿಡ್-19 ಸೋಂಕಿನ ಪ್ರಮಾಣ ಶೇ. 2ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ 1ರಿಂದ 10ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಬಿಟ್ಟು ಪರ್ಯಾಯ ವಿಧಾನದಲ್ಲಿ (ಆನ್ ಲೈನ್) ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯನ್ನು ಮುಂದುವರಿಯಲು ಜೂನ್​ 10 ರಂದು ಸರ್ಕಾರ ಆದೇಶಿಸಿತ್ತು. ಅದಾದ ಎರಡು ತಿಂಗಳ ಬಳಿಕ ಆ. 16 ರಂದು ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಆ. 23 ರಿಂದ 9 ಮತ್ತು10ನೇ ತರಗತಿಗಳನ್ನು ಪ್ರಾರಂಭದಲ್ಲಿ ನಿತ್ಯ ಅರ್ಧದಿನ (ಬೆಳಗಿನ ಅವಧಿ) ನಡೆಸಲು ಅನುಮತಿಸಿ ಸುತ್ತೋಲೆ ಹೊರಡಿಸಿತ್ತು.

ಈ ಮಧ್ಯೆ ಮೂರಾಲ್ಕು ದಿನಗಳ ಹಿಂದೆ ಆ, 23 ರಿಂದಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಆರಂಭಿಸಲು ಅವಕಾಶ ನೀಡಿ ಸರ್ಕಾರ ಆದೇಶಿಸಿದೆ. ಶಾಲಾ-ಕಾಲೇಜುಗಳ ಆರಂಭಕ್ಕೆ ಎರಡೂ ಇಲಾಖೆಗಳು ಅಗತ್ಯ ತಯಾರಿ ನಡೆಸಿವೆ. ಆದರೆ, ತರಗತಿಗಳಿಗೆ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ, ಶಾಲೆಗೆ ಬರಲು ಇಷ್ಟವಿಲ್ಲದ ಮಕ್ಕಳು ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಪಾಠ ಕೇಳಬಹುದಾಗಿದೆ‌.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ:

ಹುಬ್ಬಳ್ಳಿಯ ಸೇಂಟ್ ಮ್ಯಾರಿಸ್ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಸಿಬ್ಬಂದಿ ಬರಮಾಡಿಕೊಂಡರು.‌ ಜೊತೆಗೆ ಕೋವಿಡ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಶಾಲಾ ಆಡಳಿತ ಮಂಡಳಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ಆರಂಭಿಸುತ್ತಿದ್ದಾರೆ. ಆದರೆ ಮೊದಲ‌‌ ದಿನವಾದ ಹಿನ್ನೆಲೆ ಬೆರಳೆಣಿಕೆಯಷ್ಟು ಮಕ್ಕಳು ಆಗಮಿಸಿದ್ದಾರೆ.

ಇನ್ನು ಚಾಮರಾಜನಗರದಲ್ಲಿ ಶನಿವಾರ ಹಾಗೂ ಭಾನುವಾರವೇ ಶಾಲಾ-ಕಾಲೇಜು ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿಸಿ, ಆವರಣ ಸ್ವಚ್ಚಗೊಳಿಸಿದ್ದ ಶಾಲಾ ಆಡಳಿತ ಮಂಡಲಿ, ಇಂದು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಬಳಿಕ ಕೊಠಡಿಯೊಳಗೆ ಕಳುಹಿಸುತ್ತಿದ್ದಾರೆ. ಪಾಲಕರ ಒಪ್ಪಿಗೆ ಪತ್ರವನ್ನು ಸಹ ವಿದ್ಯಾರ್ಥಿಗಳು ತರುತ್ತಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಭೌತಿಕ ತರಗತಿಗೆ ಆಗಮಿಸಿದ ವಿದ್ಯಾರ್ಥಿಗಳು

ಒಂದು ಬೆಂಚ್​ಗೆ ಇಬ್ಬರು ವಿದ್ಯಾರ್ಥಿಗಳು:

ಒಂದು ಬೆಂಚ್​ಗೆ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲು ವ್ಯವಸ್ಥೆಮಾಡಲಾಗಿದೆ. ಜಿಲ್ಲೆಯಲ್ಲಿ 86 ಸರ್ಕಾರಿ, 55 ಅನುದಾನಿತ, 73 ಅನುದಾನ ರಹಿತ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ, ಖಾಸಗಿ, ಅನುದಾನಿತ ಸೇರಿ 1600 ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. 48 ಮಂದಿ ಬಿಟ್ಟು ಉಳಿದವರಿಗೆಲ್ಲ ಲಸಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.