ಚಾಮರಾಜನಗರ: ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಬಂದ ಖದೀಮರು ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ.
ಶಿವಬಸಪ್ಪ(75) ಕೊಲೆಯಾದವರು. ಮನೆ ಮುಂದೆ ಇದ್ದ ಶ್ರೀಗಂಧದ ಮರವನ್ಬು ಕದಿಯಲು ಬಂದಿದ್ದ ವೇಳೆ ಮನೆ ಹೊರಗಡೆ ಮಲಗಿದ್ದ ವೃದ್ಧ ಶಿವಬಸಪ್ಪನ ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಂದು ಮಾಳವೊಂದರಲ್ಲಿ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.
ಶ್ವಾನದಳ ವೃದ್ಧನ ಮೃತದೇಹ ಪತ್ತೆ ಮಾಡಿದೆ. ಕಳ್ಳರು ಶ್ರೀಗಂಧದ ಮರವನ್ನು ಅರ್ಧ ಕತ್ತರಿಸಿ ಪರಾರಿಯಾಗಿದ್ದಾರೆ. ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.