ಚಾಮರಾಜನಗರ: ಕೋಟ್ಯಂತರ ರೂ. ಅಕ್ರಮ ವಹಿವಾಟು ಆಗಲಿದೆ ಎನ್ನಲಾದ ರೈಸ್ ಪುಲ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ, ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಒಡೆತನದ ಹೋಂ ಸ್ಟೇಗೆ ಬೀಗ ಬಿದ್ದಿದೆ.
ಸೋಮವಾರವಷ್ಟೆ ಬಿಳಿಗಿರಿರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈಸ್ ಪುಲ್ಲಿಂಗ್ ದಂಧೆಯ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ರಾಜ್ಯ ವನ್ಯ ಜೀವಿ ಮಂಡಲಿ ಸದಸ್ಯ ಆರ್. ಮಲ್ಲೇಶಪ್ಪ ಒಡೆತನದ ಹೋಂ ಸ್ಟೇಗೆ ಬೀಗ ಮುದ್ರೆ ಹಾಕಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ರೈಸ್ ಪುಲ್ಲಿಂಗ್ ನ ಪುರಾತನ ಪಾತ್ರೆಯನ್ನು ಮನೆಯಲ್ಲಿರಿಸಿಕೊಳ್ಳುವುದರಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಹಣವುಳ್ಳವರೇ ಇದರ ಹಿಂದೆ ಬೀಳುವುದು ಎಂದು ಮೂಲಗಳು ಮಾಹಿತಿ ನೀಡಿವೆ.
ಇನ್ನು, ರೈಸ್ ಪುಲ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಚಿತ್ರರಂಗದ ಗಣ್ಯರ ಹೆಸರೊಂದನ್ನು ತಳಕುಹಾಕಿಕೊಂಡಿದೆ. ಬಂಧಿತರು ಮತ್ತು ಆ ಸಿನಿ ಗಣ್ಯ ವ್ಯಕ್ತಿ ಭೇಟಿಯಾಗುತ್ತಿದ್ದರು ಎಂದು ಹೇಳುತ್ತಿದ್ದು ನಿಷ್ಪಕ್ಷಪಾತ ತನಿಖೆಯಿಂದಷ್ಟೆ ಸತ್ಯಾಸತ್ಯತೆ ತಿಳಿಯಬೇಕಿದೆ.
ಏನಿದು ರೈಸ್ ಪುಲ್ಲಿಂಗ್: ಅಕ್ಕಿಯನ್ನು ಆಕರ್ಷಿಸುವ ಹಳೆಯ ಪಾತ್ರೆಯ ಜಾದೂ ತೋರಿಸಿ ಇದನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಯಾಮಾರಿಸುವ ಜ್ಯೋತಿಷಿಗಳಿದ್ದಾರೆ. ಪಾತ್ರೆಯನ್ನು ರಾಸಾಯನಿಕದಲ್ಲಿ ಅದ್ದಿ ಅಕ್ಕಿಯನ್ನು ಆಕರ್ಷಿಸುವ ಶಕ್ತಿ ತುಂಬಲಾಗುತ್ತದೆ ಎಂದು ಹೇಳಲಾಗುತ್ತದೆ. ನ