ETV Bharat / state

ಗೋಪಾಲಸ್ವಾಮಿ ಜಾತ್ರೆಗೆ ಕೊರೊನಾ ಕರಿಛಾಯೆ : ಗಡಿಜಿಲ್ಲೆಯ ಜಾತ್ರೆ, ಸಂತೆಗಳಿಗೆ ನಿರ್ಬಂಧ - ಚಾಮರಾಜನಗರ ಕೊರೊನಾ ಪರಿಣಾಮ

14 ರಿಂದ 21 ರವರೆಗೆ ನಡೆಯಬೇಕಿದ್ದ ಹಿಮವದ್ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಕೊರೊನಾ ಕರಿಛಾಯೆ ಆವರಿಸಿದೆ. ಜೊತೆಗೆ, ಮಲೆಮಹದೇಶ್ವರ ಬೆಟ್ಟದಲ್ಲಿ ಮಾ.25 ರಂದು ನಡೆಯುವ ಜಾತ್ರೆಯ ಮೇಲೂ ಕೊರೊನಾ ಪರಿಣಾಮ ಬೀರಿದೆ.

restrictions-on-chamarajanagar-district-fairs-meeting
ಗೋಪಾಲಸ್ವಾಮಿ ಜಾತ್ರೆ
author img

By

Published : Mar 14, 2020, 5:38 AM IST

ಚಾಮರಾಜನಗರ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮಾ.14 ರಿಂದ 21 ರವರಗೆ ಜಾತ್ರಾ ಮಹೋತ್ಸವ, ಸಭೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಆರ್. ರವಿ ಆದೇಶ ಹೊರಡಿಸಿದ್ದಾರೆ.

1 ರಿಂದ 6ನೇ ತರಗತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಮಾ. 14ರಿಂದ ತರಗತಿ ಹಾಗೂ ಪರೀಕ್ಷೆಗಳನ್ನು ಸ್ಥಗಿತಗೊಳಿಸಿ ಬೇಸಿಗೆ ರಜೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಗೋಪಾಲಸ್ವಾಮಿ ಜಾತ್ರೆಗೆ ಕೊರೊನಾ ಕರಿಛಾಯೆ

ಜಾತ್ರೆ ಮೇಲೆ ಕೊರೊನಾ ಕರಿಛಾಯೆ

ಜಾತ್ರೆ, ಸಂತೆಗಳ ಮೇಲೆ ನಿರ್ಬಂಧ ವಿಧಿಸಿರುವುದರಿಂದ ಮಾ.14 ರಿಂದ 21 ರವರೆಗೆ ನಡೆಯಬೇಕಿದ್ದ ಹಿಮವದ್ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಕೊರೊನಾ ಕರಿಛಾಯೆ ಆವರಿಸಿದೆ. ಜೊತೆಗೆ, ಮಲೆಮಹದೇಶ್ವರ ಬೆಟ್ಟದಲ್ಲಿ ಮಾ.25 ರಂದು ನಡೆಯುವ ಜಾತ್ರೆಯ ಮೇಲೂ ಕೊರೊನಾ ಪರಿಣಾಮ ಬೀರಿದೆ.

ಜಿಲ್ಲಾ ಆರೋಗ್ಯದಿಕಾರಿ‌‌ ಡಾ. ರವಿ‌ ಈಗಾಗಲೇ ಖಾಸಗಿ ಆಸ್ಪತ್ರೆಯ ವೈದ್ಯರೊಂದಿಗೆ ಸಭೆ ನಡೆಸಿ ಕೊರೊನಾ ನಿಗಾ ವಾರ್ಡ್​​ಗಳನ್ನು ತೆರೆಯಲು ಮನವಿ ಮಾಡಿದ್ದಾರೆ. ಜೊತೆಗೆ ಜನರು ಮುಂಜಾಗ್ರತೆ ವಹಿಸಿ ಆದರೆ, ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿರುವದಿಂದ ಗಡಿಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.