ಕೊಳ್ಳೇಗಾಲ: ಪಟ್ಟಣದ ಮರಡಿಗುಡ್ಡದ ಹಿಂಭಾಗದ ಅರಣ್ಯಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಪತ್ರಕರ್ತರ ಸಂಘದ ಭವನಕ್ಕೆ ಮಂಜೂರಾಗಿದ್ದ ನಿವೇಶನವನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆ, ಪತ್ರಕರ್ತರು ಮತ್ತು ಅರಣ್ಯ ಇಲಾಖೆಯ ನಡುವೆ ಸೃಷ್ಟಿಯಾಗಿದ್ದ ವಿವಾದಕ್ಕೆ ತೆರೆಬಿದ್ದಿದೆ.
ಓದಿ: 'ತೇಜಸ್‌ನಲ್ಲಿ ಹಾರಾಟ ನಡೆಸಿದ ತೇಜಸ್ವಿ ಸೂರ್ಯ': ಈಟಿವಿ ಭಾರತದೊಂದಿಗೆ ಅನುಭವ ಹಂಚಿಕೊಂಡಿದ್ದು ಸಂಸದ
2012 ರಲ್ಲಿ ಜಿಲ್ಲಾಧಿಕಾರಿಗಳಿಂದ ಪತ್ರಕರ್ತರ ಸಂಘದ ಭವನಕ್ಕೆ ಮಂಜೂರಾಗಿದ್ದ 10 ಸೆಂಟ್ ಭೂಮಿಯನ್ನು, ಅರಣ್ಯ ಇಲಾಖೆ ಅಕ್ರಮವಾಗಿ ಒತ್ತುವರಿ ಮಾಡಿ ಬೇಲಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಕಾರ್ಯನಿರತ ಪತ್ರಕರ್ತರ ಸಂಘವು ಶಾಸಕ ಎನ್. ಮಹೇಶ್ಗೆ ದೂರು ನೀಡಿತ್ತು.
ಈ ಹಿನ್ನೆಲೆ ಇತ್ತೀಚೆಗೆ ಶಾಸಕ ಎನ್. ಮಹೇಶ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಆರ್.ಸಿ ಜೆ.ಸಿ. ಪ್ರಕಾಶ್ ಸಮ್ಮುಖದಲ್ಲಿ ಅರಣ್ಯ ಇಲಾಖೆಯ ಡಿಎಫ್ಓ ಏಡುಕುಂಡಲ್ ಅವರೊಂದಿಗೆ ಸಭೆ ನಡೆಸಿದ್ದರು. ಪತ್ರಕರ್ತರ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಪರಿಗಣಿಸಿ ಅರಣ್ಯ ಇಲಾಖೆ ಅಕ್ರಮ ಬೇಲಿ ಹಾಕಿ ಒತ್ತುವರಿ ಮಾಡಿರುವುದು ತಿಳಿದು ಬಂದಿತ್ತು.
ಪತ್ರಕರ್ತರ ಭವನಕ್ಕೆ ಸೇರಬೇಕಾದ ಭೂಮಿಯನ್ನು ಈ ಕೂಡಲೆ ಅರಣ್ಯ ಇಲಾಖೆ ಬಿಟ್ಟುಕೊಡಬೇಕು, ಒತ್ತುವರಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತಹಶೀಲ್ದಾರ್ ಕುನಾಲ್ ಸಮ್ಮುಖದಲ್ಲಿ ಭೂಮಿಯ ಸರ್ವೇ ಮಾಡಿಸಿ ಪತ್ರಕರ್ತರ ಸಂಘದ ನಿರ್ಮಾಣದ ಆಸ್ತಿಯನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಯಿತು.