ಚಾಮರಾಜನಗರ: ಕೋವಿಡ್ ನಿರ್ವಹಣೆ ಕೆಲಸ ಬಿಟ್ಟು ಸಿಎಂ ಬದಲಾವಣೆ, ಸರ್ಕಾರ ಬದಲಾವಣೆ ಎಂದು ಹೊರಡುತ್ತಿರುವ ಬಿಜೆಪಿ ಸಚಿವರು, ಎಂಎಲ್ಎಗಳು ಲೂಸ್ಗಳಾಗಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ವಾಗ್ದಾಳಿ ನಡೆಸಿದರು.
ಓದಿ: BSY ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಸಂಸದ ಪ್ರತಾಪ್ ಸಿಂಹ
ಹನೂರು ತಾಲೂಕಿನ ಸೇಬಿನ ಕೋಬೆ ಹಾಡಿಯಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊರೊನಾ ಜನರನ್ನು ಕಂಗೆಡಿಸಿದೆ, ಎಲ್ಲೂ ಹೆಚ್ಚಿನ ಐಸಿಯು ಬೆಡ್ ಗಳಿಲ್ಲ, ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ, ಸಿಎಂ ಸುಮ್ಮನೇ ಮೀಟಿಂಗ್ ಮಾಡುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಟೈಮಲ್ಲಿ ಬಿಜೆಪಿಯ ಲೂಸ್ ಸಚಿವರು, ಎಂಎಲ್ಎಗಳು ಸರ್ಕಾರ ಬದಲಿಸಲು, ಸಿಎಂ ಬದಲಿಸಲು ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೊದಲ ಲಾಕ್ಡೌನ್ ನಲ್ಲಿ ಕೊಟ್ಟ ಪ್ಯಾಕೇಜ್ ಹಾಗೂ ಈಗ ಕೊಟ್ಟಿರುವ ಪ್ಯಾಕೇಜ್ಗಳು ಏನೇನೂ ಉಪಯುಕ್ತವಲ್ಲ. ಪ್ಯಾಕೇಜ್ ಘೋಷಿಸಿ ಹಲವಾರು ನಿಬಂಧನೆಗಳನ್ನು ಹಾಕಿದ್ದಾರೆ. ಮೋದಿ ಹಾಗೂ ಯಡಿಯೂರಪ್ಪ ಪ್ಯಾಕೇಜ್ ಏನೂ ವರ್ಕ್ ಆಗುವುದಿಲ್ಲ. ಇನ್ನು, ಆ್ಯಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಸರ್ಕಾರ 2 ಲಕ್ಷ ರೂ. ಕೊಟ್ಟಿರುವುದು ಏನಕ್ಕೂ ಸಾಲುವುದಿಲ್ಲ, ದುರಂತದಲ್ಲಿ ಮೃತಪಟ್ಟ ಎಲ್ಲರಿಗೂ ತಲಾ 10 ಲಕ್ಷ ರೂ. ಕೊಡಬೇಕೆಂದು ಆಗ್ರಹಿಸಿದರು.
ವ್ಯಾಕ್ಸಿನ್ ಅಭಾವಕ್ಕೂ ಕಾಂಗ್ರೆಸ್ಗೂ ಏನು ಸಂಬಂಧ..?
ಬಿಜೆಪಿ ಅವರು ಎಂದು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ, ತಮ್ಮ ತಪ್ಪುಗಳನ್ನು ಕಾಂಗ್ರೆಸ್ ಮೇಲೆ ಹೊರಿಸುವುದು ಇಲ್ಲವೇ ರಾಹುಲ್ ಗಾಂಧಿ ಮೇಲೆ ಹೇಳುವುದು ಕಾಮನ್ ಎನ್ನುವಂತಾಗಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳು ಒಂದಾದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬಿಜೆಪಿ ಯುವ ಮೋರ್ಚಾ ತನ್ನ ಚಿಲ್ಲರೆ ರಾಜಕೀಯ ಬಿಡಬೇಕು, ಈ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ, ಬಿಜೆಪಿ ಮೊದಲು ಚಿಲ್ಲರೆ ರಾಜಕೀಯ ಬಿಡಲಿ ಎಂದು ಒತ್ತಾಯಿಸಿದರು.