ಚಾಮರಾಜನಗರ: ಚಾಮರಾಜನಗರ ಮೆಡಿಕಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗೆ ಬಟ್ಟೆ ಬಿಚ್ಚಿಸಿ, ನೃತ್ಯ ಮಾಡಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ತುಮಕೂರು ಮೂಲದ ವಿದ್ಯಾರ್ಥಿಯೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು, ನೊಂದ ವಿದ್ಯಾರ್ಥಿಯ ಪೋಷಕರು ಇಲ್ಲಿನ ಗ್ರಾಮಾಂತರ ಪೊಲೀಸರ ಗಮನಕ್ಕೆ ತಂದು ಸಂಧಾನವಾಗಿದೆ ಎಂದು ತಿಳಿದು ಬಂದಿದೆ.
ಬಟ್ಟೆ ಬಿಚ್ಚಿಸುವುದು, ತಾವು ಹೇಳಿದಂತೆ ಡ್ಯಾನ್ಸ್ ಮಾಡಿಸುವುದು, ಅಶ್ಲೀಲವಾಗಿ ಸೌಂಡ್ ಮಾಡುವುದು, ಕುರ್ಚಿಯಲ್ಲಿ ಕೂರುವಂತೆ ಕೂರಿಸುವುದು, ಕೆನ್ನೆಗೆ ಹೊಡೆಯುವುದು ಈ ರೀತಿಯಾಗಿ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುತ್ತಿದ್ದಾರೆ ಎಂದು ನೊಂದ ವಿದ್ಯಾರ್ಥಿ ಪಾಲಕರ ಬಳಿ ಅಳಲು ತೋಡಿಕೊಂಡಿದ್ದಾನೆ. ಪೊಲೀಸರು ರೌಂಡ್ಸ್ಗೆ ತೆರಳಿದ ವೇಳೆ ಪಾಲಕರು ಸೀನಿಯರ್ ವಿದ್ಯಾರ್ಥಿಗಳ ರ‍್ಯಾಗಿಂಗ್ ವಿಚಾರ ಪ್ರಸ್ತಾಪಿಸಿ ಐವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ಪೊಲೀಸರು ವಿದ್ಯಾರ್ಥಿಗಳನ್ನು ಯಾಕೆ ಕರೆದೊಯ್ದರು ಎಂಬುದು ಗೊತ್ತಿಲ್ಲ. ರ‍್ಯಾಗಿಂಗ್ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ದೂರು ಬಂದಿಲ್ಲ ಎಂದು ಕಾಲೇಜಿನ ಡೀನ್ ಡಾ.ಸಂಜೀವ್ ಹೇಳಿದ್ದಾರೆ. ಇನ್ನೊಂದೆಡೆ ಕಿರಿಯ ವಿದ್ಯಾರ್ಥಿಯ ಪಾಲಕರು ಹಾಗು ರ‍್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಕರೆಸಿ ಸಂಧಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಬಟ್ಟೆ ಬಿಚ್ಚಿಸಿ ಸೀನಿಯರ್ಸ್ಗಳಿಂದ ರ‍್ಯಾಗಿಂಗ್ ಆರೋಪ..! - chamrajnagar medical college issue
ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಿಗೆ ಬಟ್ಟೆ ಬಿಚ್ಚಿಸುವುದು, ತಾವು ಹೇಳಿದಂತೆ ಡ್ಯಾನ್ಸ್ ಮಾಡುವಂತೆ ರ‍್ಯಾಗಿಂಗ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
![ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಬಟ್ಟೆ ಬಿಚ್ಚಿಸಿ ಸೀನಿಯರ್ಸ್ಗಳಿಂದ ರ‍್ಯಾಗಿಂಗ್ ಆರೋಪ..! ragging alligation against chamrajnagar medical college](https://etvbharatimages.akamaized.net/etvbharat/prod-images/768-512-11210962-480-11210962-1617091796864.jpg?imwidth=3840)