ಚಾಮರಾಜನಗರ : ಬಿಜೆಪಿಗರಿಗೆ ನಾಡಿನ ಜ್ವಲಂತ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ವಿವಾದ ಮಾಡುವುದರಲ್ಲಿ ನಿಸ್ಸೀಮರು, ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಸಣ್ಣದನ್ನು ದೊಡ್ಡದು ಮಾಡುತ್ತಾರೆ ಎಂದು ಮಾಂಸ ಸೇವಿಸಿ ಸಿದ್ದರಾಮಯ್ಯ ದೇಗುಲಕ್ಕೆ ಭೇಟಿ ಬಗ್ಗೆ ಬಿಜೆಪಿ ಟೀಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಾಣ ಕಿಡಿಕಾರಿದರು.
ಚಾಮರಾಜನಗರದಲ್ಲಿ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಬಿಜೆಪಿಯವರು ಅಮಾನಿಯವಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯವರಿಗೆ ಸುಳ್ಳೇ ಅವರ ಮನೆಯ ದೇವರು, ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಮೊಟ್ಟೆ ಎಸೆದ ವ್ಯಕ್ತಿ ಬಿಜೆಪಿಯ ಕಾರ್ಯಕರ್ತ, ಅವನು ಆರ್ಎಸ್ಎಸ್ ಹಾಗೂ ಅಪ್ಪಚ್ಚು ರಂಜನ್ ಜೊತೆ ಇರುವ ಫೋಟೋಗಿಂತ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.
ಈಗಾಗಲೇ ಘಟನೆಯ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಉನ್ನತ ಮಟ್ಟದ ತನಿಖೆಯಾಗಬೇಕು, ಆ. 26 ರಂದು ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ : ಮೊಟ್ಟೆ ಎಸೆದಿದ್ದಕ್ಕೆ ಮಡಿಕೇರಿ ಚಲೋ ಕೈಬಿಡಿ, ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ: ಹೆಚ್ ವಿಶ್ವನಾಥ್