ETV Bharat / state

'ಬಾಯಲ್ಲಿ ಭೀಮ, ಹೃದಯದಲ್ಲಿ ರಾಮ, ಕೊಳ್ಳೇಗಾಲ ಜನತೆಗೆ ಪಂಗನಾಮ' - ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಟಾಂಗ್

ಶಾಸಕ ಎನ್.ಮಹೇಶ್ ಅವರು ಬಿಜೆಪಿ ಸೇರುವ ಮೂಲಕ ರಾಜಕೀಯದಲ್ಲಿ ಎಡವಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.

R Dhruvanarayana
ಆರ್.ಧ್ರುವನಾರಾಯಣ
author img

By

Published : Aug 5, 2021, 2:23 PM IST

ಚಾಮರಾಜನಗರ: ಬಾಯಲ್ಲಿ ಭೀಮ, ಹೃದಯದಲ್ಲಿ ರಾಮ, ಕೊಳ್ಳೇಗಾಲ ಜನತೆಗೆ ಪಂಗನಾಮ ಎಂಬುದು ಬಿಜೆಪಿ ಸೇರಿದ ಶಾಸಕ ಎನ್.ಮಹೇಶ್​ಗೆ ಅನ್ವಯ ಆಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಿಮಾನವಿಲ್ಲದ ಬದುಕು ಶೂನ್ಯ ಎಂದು ಬಾಬಾ ಸಾಹೇಬರು ಹೇಳಿದ್ದರು. ಮಹೇಶ್ ಗೆದ್ದಿರುವುದು ಆನೆ ಗುರುತಿನಲ್ಲಿ, ಈಗ ಕಮಲಕ್ಕೆ ಸೇರುತ್ತಿರುವುದರಿಂದ ನೈತಿಕತೆ ಪ್ರದರ್ಶಿಸಿ ಬಾಂಬೆ ಬಾಯ್ಸ್ ರೀತಿ ಚುನಾವಣೆ ಎದುರಿಸಬೇಕು ಎಂದು ಧ್ರುವನಾರಾಯಣ ಎಂದರು.

ದಲಿತ ಸಮುದಾಯ ಮಹೇಶ್ ಅವರಿಗೆ ಕೊಟ್ಟಷ್ಟು ವ್ಯಾಪಕ ಬೆಂಬಲ ಯಾರಿಗೂ ಕೊಟ್ಟಿರಲಿಲ್ಲ. ಈಗ ನೀಲಿ ಶಾಲು ಹೋಗಿ ಕೇಸರಿ ಶಾಲು ಬಂದಿದೆ. ಅಂಬೇಡ್ಕರ್, ಕಾನ್ಷಿರಾಂ, ಮಾಯಾವತಿ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದವರು ಈಗ ಎಡವಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್​ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರುತ್ತಿರುವುದಾಗಿ ಮಹೇಶ್ ಹೇಳಿದ್ದಾರೆ. ನಾನು ಶಾಸಕನಾಗಿದ್ದ ವೇಳೆ ವಿಪಕ್ಷದಲ್ಲಿದಾಗಲೇ ಹೆಚ್ಚು ಕೆಲಸ ಮಾಡಿದ್ದೇನೆ. ಕೆಲಸ ಮಾಡಲು ಆಡಳಿತ ಪಕ್ಷವೇ ಆಗಬೇಕಿಲ್ಲ. ಮಹೇಶ್ ಅವರು ಬಿಜೆಪಿ ಸೇರುವಾಗ ಮಂತ್ರಿಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎನ್ನುವ ಮೂಲಕ ದ್ವಂದ್ವದ ಮಾತುಗಳನ್ನು ಆಡುತ್ತಿದ್ದಾರೆ, ವಿಚಲಿತರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.