ETV Bharat / state

ಚಾಮರಾಜನಗರದಲ್ಲೂ ನಡೆದಿತ್ತು ಅಪ್ಪು 'ಗಂಧದಗುಡಿ' ಶೂಟಿಂಗ್: ಕಳ್ಳಬೇಟೆ ಶಿಬಿರಗಳು ಸೆರೆ

ಬಹುನಿರೀಕ್ಷಿತ ನಟ ಪುನೀತ್ ರಾಜಕುಮಾರ್ ಕನಸಿನ ಗಂಧದಗುಡಿ ವೈಲ್ಡ್ ಡಾಕ್ಯುಮೆಂಟರಿ ಟೀಸರ್​​ ಇಂದು ಬಿಡುಗಡೆಗೊಂಡಿದ್ದು, ಈ ಸಾಕ್ಷ್ಯಚಿತ್ರದ ಶೂಟಿಂಗ್ ಚಾಮರಾಜನಗರದಲ್ಲೂ ನಡೆದಿದೆ.

Gandhadagudi shooting took place in Chamarajanagar
ಚಾಮರಾಜನಗರದಲ್ಲೂ ನಡೆದಿದೆ ಗಂಧದಗುಡಿ ಶೂಟಿಂಗ್
author img

By

Published : Dec 6, 2021, 4:10 PM IST

ಚಾಮರಾಜನಗರ: ಪುನೀತ್​ ರಾಜ್​ ಕುಮಾರ್​​​ ಕನಸಿನ ಗಂಧದಗುಡಿ ಸಾಕ್ಷ್ಯಚಿತ್ರದ ಶೂಟಿಂಗ್ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲೂ ನಡೆದಿದ್ದು, ಇಲ್ಲಿನ ಸಿಬ್ಬಂದಿ ಕೆಲಸಗಳನ್ನು ಸೆರೆ ಹಿಡಿದಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಪುನೀತ್ ರಾಜಕುಮಾರ್ ಅಭಿನಯದ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಿಸಿರುವ ಗಂಧದ ಗುಡಿ ಡಾಕ್ಯುಮೆಂಟರಿ ಟೈಟಲ್​​​ ಟೀಸರ್ ಇಂದು ಬಿಡುಗಡೆಯಾಗಿದೆ. ಇದರಲ್ಲಿ ನಮ್ಮ ರಾಜ್ಯದ ಅರಣ್ಯಗಳ ಪ್ರಾಕೃತಿಕ ಸೌಂದರ್ಯ ತಾಣಗಳನ್ನು ಚಿತ್ರಿಸಲಾಗಿದೆ. ಅದರಲ್ಲಿ ಬಿಆರ್​ಟಿ ಕೆ ಗುಡಿ, ಬೂದಿಪಡಗ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಿದ್ದಾರೆ.

  • " class="align-text-top noRightClick twitterSection" data="">

ಪುನೀತ್ ಬಂದು ಶೂಟಿಂಗ್ ಮಾಡುವ ತನಕ ಅಧಿಕಾರಿಗಳಿಗೆ ಅಪ್ಪು ಬರುತ್ತಾರೆ ಎಂದು ಗೊತ್ತಿರಲಿಲ್ಲವಂತೆ. ಕಾಡಿನ ಕಳ್ಳಬೇಟೆ ಶಿಬಿರದಲ್ಲಿ ಸಿಬ್ಬಂದಿ ಹೇಗೆ ಇರ್ತಾರೆ, ಏನ್ ಮಾಡ್ತಾರೆ, ಅವರಿಗೆ ಊಟದ ವ್ಯವಸ್ಥೆ ಹೇಗೆ ಎಂಬುದನ್ನು ಚಿತ್ರೀಕರಿಸಿದ್ದಾರೆ. ಇಡೀ ಬಿಆರ್​ಟಿಯ ಸೊಬಗು ರಾಜ್ಯದಲ್ಲಿ ಮತ್ತಷ್ಟು ಪಸರಿಸಲು ಗಂಧದಗುಡಿ ಕಾರಣವಾಗಲಿದೆ ಎಂಬುದು ಅರಣ್ಯ ಇಲಾಖೆ ಅಭಿಪ್ರಾಯವಾಗಿದೆ.

ಈ ಹಿಂದೆ ಗಡಿ ಜಿಲ್ಲೆಯ ಪ್ರವಾಸೋದ್ಯಮವನ್ನು ಸೆಳೆಯುವ ದೃಷ್ಟಿಯಿಂದ ಜಿಲ್ಲಾಡಳಿತ ಹೊರ ತಂದಿದ್ದ ಚಾಮರಾಜನಗರ-ಹುಲಿಗಳ‌ ನಾಡು ಎಂಬ ಪ್ರಮೋಷನಲ್ ವಿಡಿಯೋವನ್ನು ಅಪ್ಪು ಬಿಡುಗಡೆ ಮಾಡಿ ಜಿಲ್ಲೆಗೆ ಆಗಮಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಅಪ್ಪು'ಗಂಧದಗುಡಿ'ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.