ETV Bharat / state

ಸಾಮಾಜಿಕ ಕಳಕಳಿ ಸಾರಿದ ಖಾಕಿ: ರಸ್ತೆ ಗುಂಡಿಗಳಿಗೆ ಮಣ್ಣು ತುಂಬಿಸಿ ದುರಸ್ತಿ ಮಾಡಿದ ಪೊಲೀಸ್​ ತಂಡ

ಸಂತೇಮರಳ್ಳಿ ಬಸ್ ನಿಲ್ದಾಣವು ಗುಂಡಿಮಯವಾಗಿ ಪ್ರಯಾಣಿಕರು ಹಾಗೂ ಬಸ್ ಚಾಲಕರಿಗೆ ಓಡಾಡಲು ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ತಾಜುವುದ್ಧೀನ್ ಮತ್ತು ತಂಡ ಟ್ರ್ಯಾಕ್ಟರ್ ಮೂಲಕ ನಿಲ್ದಾಣದ ಗುಂಡಿಗಳಿಗೆ ಮಣ್ಣು ತುಂಬಿಸಿ ಸಮತಟ್ಟು ಮಾಡಿದ್ದಾರೆ.

author img

By

Published : Sep 6, 2021, 9:43 AM IST

kollegala
ರಸ್ತೆ ಗುಂಡಿಗಳಿಗೆ ಮಣ್ಣು ತುಂಬಿಸಿ ದುರಸ್ತಿ ಮಾಡಿದ ಪಿಎಸ್​ಐ ತಂಡ

ಕೊಳ್ಳೇಗಾಲ: ಬಸ್ ನಿಲ್ದಾಣದಲ್ಲಿದ್ದ ಗುಂಡಿಗಳಿಗೆ ಮಣ್ಣು ಹಾಕಿ ರಸ್ತೆಯನ್ನು ಸರಿಮಾಡುವ ಮೂಲಕ ಸಂತೇಮರಳ್ಳಿ ಪೊಲೀಸ್ ಸಬ್​ ಇನ್​​ಸ್ಪೆಕ್ಟರ್​ ತಾಜುವುದ್ದೀನ್ ಮತ್ತು ತಂಡದವರು ಸಾಮಾಜಿಕ ಕಾರ್ಯ ಮಾಡಿದ್ದಾರೆ. ಇವರ ಈ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇಲ್ಲಿನ ಸಂತೇಮರಳ್ಳಿ ಬಸ್ ನಿಲ್ದಾಣವು ಗುಂಡಿಮಯವಾಗಿ ಪ್ರಯಾಣಿಕರು ಹಾಗೂ ಬಸ್ ಚಾಲಕರಿಗೆ ಓಡಾಡಲು ಸಮಸ್ಯೆಯಾಗಿತ್ತು. ಅಷ್ಟೇ ಅಲ್ಲದೆ, ನಿಲ್ದಾಣದಲ್ಲಿ ನಿಲ್ಲಿಸಬೇಕಾದ ಬಸ್​ಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈ ಹಿನ್ನೆಲೆಯಲ್ಲಿ ಖುದ್ದಾಗಿ ಫೀಲ್ಡ್​ಗಿಳಿದ ಪಿಎಸ್ಐ ತಾಜುವುದ್ಧೀನ್ ಮತ್ತು ತಂಡ ಟ್ರ್ಯಾಕ್ಟರ್ ಮೂಲಕ ನಿಲ್ದಾಣದ ಗುಂಡಿಗಳಿಗೆ ಮಣ್ಣು ತುಂಬಿಸಿ ಸಮತಟ್ಟು ಮಾಡಿದ್ದಾರೆ.

ಇನ್ನು ಜನ ಪ್ರತಿನಿಧಿಗಳಿಂದ ಆಗಬೇಕಿದ್ದ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ. ಇವರ ಈ ಉತ್ತಮ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.