ETV Bharat / state

ಕೊಳ್ಳೇಗಾಲ: ತೆರಿಗೆ ಹೆಚ್ಚಳ ವಿರೋಧಿಸಿ ವರ್ತಕರಿಂದ ಪ್ರತಿಭಟನೆ

author img

By

Published : May 8, 2020, 3:19 PM IST

ವ್ಯಾಪಾರ ಮಳಿಗೆಗಳಿಗೆ ನಗರಸಭೆ ಹೆಚ್ಚುವರಿ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ಕೊಳ್ಳೇಗಾಲದಲ್ಲಿ ವರ್ತಕರು ಪ್ರತಿಭಟನೆ ನಡೆಸಿದರು.

protests of  merchants against tax hike in Kollegal
ತೆರಿಗೆ ಹೆಚ್ಚಳ ವಿರೋಧಿಸಿ ವರ್ತಕರ ಪ್ರತಿಭಟನೆ

ಕೊಳ್ಳೇಗಾಲ: ಪಟ್ಟಣದ ವ್ಯಾಪಾರ ಮಳಿಗೆಗಳಿಗೆ ನಗರಸಭೆ ಹೆಚ್ಚುವರಿ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿ ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿಯಲ್ಲಿ ಜಮಾಯಿಸಿದ ವರ್ತಕರು, ಲಾಕ್​ಡೌನ್​ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿದ್ದೇವೆ. ಈ ಸಮಯದಲ್ಲಿ ಹೆಚ್ಚುವರಿ ತೆರಿಗೆ ವಿಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತೆರಿಗೆ ಹೊರೆ ಕಡಿಮೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ತೆರಿಗೆ ಹೆಚ್ಚಳ ವಿರೋಧಿಸಿ ವರ್ತಕರ ಪ್ರತಿಭಟನೆ

ಈ ವೇಳೆ ಮಾತನಾಡಿದ ವರ್ತಕರ ಒಕ್ಕೂಟದ ಅಧ್ಯಕ್ಷ ಎ.ಪಿ.ಎಸ್.ರಾಜು, ಒಂದೂವರೆ ತಿಂಗಳ ಲಾಕ್​ಡೌನ್​ನಿಂದ ಮುಕ್ತಿ ಪಡೆದು ಈಗಷ್ಟೇ ಅಂಗಡಿ ಮಳಿಗೆ ತೆರೆದು ವ್ಯಾಪಾರ ಪ್ರಾರಂಭಿಸಿದ್ದೇವೆ. ಇಂತಹ ಸಮಯದಲ್ಲಿ ನಗರಸಭೆ ತೆರಿಗೆ ಹೆಚ್ಚಿಸಿರುವುದು ನಮಗೆ ದೊಡ್ಡ ಹೊರೆಯಾಗಿದೆ. ಆದ್ದರಿಂದ ಆಗಸ್ಟ್​ವರೆಗೆ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು.

ತೆರಿಗೆ ಕಡಿತಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದ ವರ್ತಕರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.