ETV Bharat / state

ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ, ತಳ್ಳು ಗಾಡಿಯಲ್ಲಿ ಬೈಕ್ ಇಟ್ಟು ಪ್ರತಿಭಟನೆ - ಎಸ್​​ಡಿಪಿಐ ಕಾರ್ಯಕರ್ತರು

ಗುಂಡ್ಲುಪೇಟೆ ವೃತ್ತದಿಂದ ಭುವನೇಶ್ವರಿ ವೃತ್ತದವರೆಗೆ ತಳ್ಳುವ ಗಾಡಿಯಲ್ಲಿ ಬೈಕ್, ಖಾಲಿ ಸಿಲಿಂಡರ್​​​ಗಳನ್ನು ಇಟ್ಟುಕೊಂಡು ಮೆರವಣಿಗೆ ನಡೆಸಲಾಯಿತು.

SDPI protest chamrajnagara
ಎಸ್​​ಡಿಪಿಐ ವಿನೂತನ ಪ್ರತಿಭಟನೆ
author img

By

Published : Feb 18, 2021, 3:52 PM IST

ಚಾಮರಾಜನಗರ: ಪೆಟ್ರೋಲ್ ಬೆಲೆ 100 ರೂ‌. ಆಸುಪಾಸಿನಲ್ಲಿರುವುದರಿಂದ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಗಗನಮುಖಿ ಆಗುತ್ತಿರುವುದನ್ನು ಖಂಡಿಸಿ ಎಸ್​​ಡಿಪಿಐ ಕಾರ್ಯಕರ್ತರು ನಗರದಲ್ಲಿ ವಿನೂತನವಾಗಿ ಪ್ರತಿಭಟಿಸಿದರು.

ಪೆಟ್ರೋಲ್ ಬೆಲೆ ಏರಿಕೆ ಖಂಡನೆ

ಓದಿ: ತೆರವಾಗಿದ್ದ ಪರಿಷತ್​ ಸದಸ್ಯ ಧರ್ಮೇಗೌಡರ ಸ್ಥಾನಕ್ಕೆ ಉಪ ಚುನಾವಣೆ ದಿನಾಂಕ ಫಿಕ್ಸ್​

ಗುಂಡ್ಲುಪೇಟೆ ವೃತ್ತದಿಂದ ಭುವನೇಶ್ವರಿ ವೃತ್ತದವರೆಗೆ ತಳ್ಳುವ ಗಾಡಿಯಲ್ಲಿ ಬೈಕ್, ಖಾಲಿ ಸಿಲಿಂಡರ್​​​ಗಳನ್ನು ಇಟ್ಟುಕೊಂಡು ಮೆರವಣಿಗೆ ಮಾಡಿದರು. ಬೆಲೆ ಏರಿಕೆಯಿಂದ ವಾಹನ ಚಲಾಯಿಸದಂತಾಗಿದೆ, ಬೆಲೆ ಏರಿಕೆ ಬಡವರ ಜೀವನವನ್ನು ದುಸ್ತರವಾಗಿಸಿದೆ ಎಂದು ಆರೋಪಿಸಿದರು. ಕ್ರಿಕೆಟ್ ಬ್ಯಾಟ್, ಹೆಲ್ಮೆಟ್ ಹಿಡಿದು ಪೆಟ್ರೋಲ್ ದರ ಸೆಂಚುರಿ ಬಾರಿಸಿದ ಕುರಿತು ಅಣಕು ಮಾಡಿದರು.

ದರ ಏರಿಕೆ ವಿರುದ್ಧ ಮಾತನಾಡುತ್ತ ಅಧಿಕಾರ ಹಿಡಿದ ಮೋದಿ ಸರ್ಕಾರ, ಈಗ ಕಣ್ಮುಚ್ಚಿ ಕುಳಿತಿದೆ. ಈ ಪರಿ ಬೆಲೆ ಏರಿಕೆ ಉಂಟಾದರೆ ಜೀವನ ನಡೆಸಲು ಅಸಾಧ್ಯ. ಕೂಡಲೇ, ಇಂಧನ ಹಾಗೂ ಅಡುಗೆ ಅನಿಲದ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.