ETV Bharat / state

9 ತಂಡಗಳಿಂದ ಕಮಿಷನ್ ಬಿಜೆಪಿ ಸರ್ಕಾರದ ವಿರುದ್ಧ ಜನಜಾಗೃತಿ: ಸಿದ್ದರಾಮಯ್ಯ

ಟಗರಿನ ತಲೆಗೆ 'ಸಿದ್ದಣ್ಣ- ಬಿಜೆಪಿಗೆ ಗುದ್ದಣ್ಣ' ಎಂದು ಬೋರ್ಡ್ ಬರೆದು ಹಾಕಿ ಮೆರವಣಿಗೆ ಮಾಡಿದ ಕೈ ನಾಯಕರು. ವೇದಿಕೆಯಲ್ಲಿ ಖಾಲಿ ಸಿಲಿಂಡರ್​ಗಳನ್ನು ಜೋಡಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು‌.

Opposition leader Siddaramayya
ವಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Apr 19, 2022, 1:52 PM IST

ಚಾಮರಾಜನಗರ: 40 ಪರ್ಸೆಂಟ್ ಸರ್ಕಾರದ ವಿರುದ್ಧ 9 ತಂಡಗಳ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಚಾಮರಾಜನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ. ಕಮಿಷನ್ ಆಡಳಿತದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಜೆಪಿ ದುರಾಡಳಿತ ಬಗ್ಗೆ ಜಿಲ್ಲಾ ಕೇಂದ್ರಗಳಲ್ಲಿ 5 ದಿನಗಳ ಕಾಲ ಜಾಗೃತಿ ಮೂಡಿಸಲಾಗುವುದು ಎಂದರು.

ಕಾಂಗ್ರೆಸ್​ನಿಂದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ

ಪ್ರತಿಭಟನೆಯಲ್ಲಿ ಗಮನ ಸೆಳೆದ ಟಗರು, ಖಾಲಿ ಸಿಲಿಂಡರ್‌: ರೈತ ಮುಖಂಡ ಅಣಗಳ್ಳಿ ಬಸವರಾಜ್ ಪ್ರತಿಭಟನೆಯಲ್ಲಿ ಟಗರು ತರುವ ಮೂಲಕ ಗಮನ ಸೆಳೆದರು. ಟಗರಿನ ತಲೆಗೆ 'ಸಿದ್ದಣ್ಣ- ಬಿಜೆಪಿಗೆ ಗುದ್ದಣ್ಣ' ಎಂದು ಬೋರ್ಡ್ ಬರೆದು ಹಾಕಿ ಮೆರವಣಿಗೆ ಮಾಡಿದರು‌. ವೇದಿಕೆಯಲ್ಲಿ ಖಾಲಿ ಸಿಲಿಂಡರ್​ಗಳನ್ನು ಜೋಡಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು‌.

ಪ್ರವಾಸಿ ಮಂದಿರದಿಂದ ನಗರದ ವಿವಿಧ ರಸ್ತೆಗಳಲ್ಲಿ ನೂರಾರು ಕೈ ಕಾರ್ಯಕರ್ತರ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಇ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಶಾಸಕ ಪುಟ್ಟರಂಗಶೆಟ್ಟಿ ಹೆಜ್ಜೆ ಹಾಕಿದರು.

ಇದನ್ನೂ ಓದಿ: PSI ಅಕ್ರಮ ನೇಮಕಾತಿ ಆರೋಪ ಎದುರಿಸುತ್ತಿರುವ ದಿವ್ಯಾ ಮಾಜಿ ಸಿಎಂ ಆಪ್ತೆ: ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.