ETV Bharat / state

ಚಾಮರಾಜನಗರ : ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆಯುವ ಅರ್ಚಕ.. ವಿಡಿಯೋ ನೋಡಿ - ಕುದಿಯುವ ಎಣ್ಣೆಯಲ್ಲಿ ಕೈಯದ್ದಿ ಕಜ್ಜಾಯ ತೆಗೆಯುವ ಅರ್ಚಕ

ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ಇಂದು ಸಿದ್ದಪ್ಪಾಜಿ ದೇಗುಲದಲ್ಲಿ ಪವಾಡ ನಡೆದಿದೆ. ಕುದಿಯುವ ಎಣ್ಣೆಯಲ್ಲಿನ ಕಜ್ಜಾಯ ಮೇಲೆತ್ತುವುದು ಅಚ್ಚರಿಗೆ ಕಾರಣವಾಗಿದೆ..

priest-put-his-hand-in-boiling-oil-at-temple-fest
ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಕಜ್ಜಾಯ ತೆಗೆಯುವ ಅರ್ಚಕ
author img

By

Published : Nov 29, 2021, 10:47 PM IST

ಚಾಮರಾಜನಗರ : ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಹನೂರು ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಸಿದ್ದಪ್ಪಾಜಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿದೆ. ಈ ವೇಳೆ ಕುದಿಯುವ ಎಣ್ಣೆಯಲ್ಲಿ ಅರ್ಚಕರು ಕೈ ಅದ್ದಿ ಅಚ್ಚರಿ ಮೂಡಿಸಿದ್ದಾರೆ.

ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆಯುವ ಅರ್ಚಕರು..

ಒಲೆಯ ಮೇಲೆ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕುವ ಮೂಲಕ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದ್ದಾರೆ. ದೇವಾಲಯದಲ್ಲಿ ವಾದ್ಯ ಮೇಳದೊಂದಿಗೆ ಕಂಡಾಯ ಹೊತ್ತ ಅರ್ಚಕ ಸಿದ್ದರಾಜು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಕುಣಿಯುತ್ತಾ ಬಂದು ಕುದಿಯುತ್ತಿದ್ದ ಎಣ್ಣೆಗೆ ಕೈ ಹಾಕಿ 3 ಬಾರಿ ಕಜ್ಜಾಯವನ್ನು ಎತ್ತಿದರು.

ಜೊತೆಗೆ ನೆರೆದಿದ್ದ ಭಕ್ತರ ಮೇಲೂ ಕುದಿಯುವ ಎಣ್ಣೆ ಎರಚಿರುವುದು ಕಂಡು ಬಂದಿದೆ. ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದರೂ ಸುಡದೇ ಇರುವುದು ಅಚ್ಚರಿ ಹುಟ್ಟಿಸಿದೆ.

ಇದನ್ನೂ ಓದಿ: ಹುಟ್ಟಿನಿಂದಲೇ 9 ವರ್ಷದ ಬಾಲಕಿ ಹೊಟ್ಟೆಯಲ್ಲಿ ಮಗು.. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.