ಚಾಮರಾಜನಗರ: ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮತ್ತು ಸುವರ್ಣ ಚಾರಿಟೆಬಲ್ ಟ್ರಸ್ಟ್ ಆಧ್ಯಾತ್ಮಿಕ ಕ್ಷೇತ್ರಕ್ಕೆ ಕೊಡಮಾಡುವ ಜ್ಯೋತಿರ್ವಿದ್ಯಾಭಾಸ್ಕರ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಅರ್ಚಕ, ಜ್ಯೋತಿಷಿ ಸುಮಂತ್ ಅವರಿಗೆ ಘೋಷಿಸಲಾಗಿದೆ.
ಇದೇ ಮೇ 5 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ಪುರಸ್ಕಾರ ಕೊಟ್ಟು ಗೌರವಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆಯಾಗಿದೆ. ಸುಮಂತ್ ಅವರು ಹರಿದ್ವಾರ ಮತ್ತು ಋಷಿಕೇಶದಲ್ಲಿ 3 ವರ್ಷ ಶೈವಾಗಮ ಶಿಕ್ಷಣ ಪಡೆದಿದ್ದಾರೆ. ಕೊರೊನಾ ಕಾಲದಲ್ಲಿ ಹತ್ತಾರು ಬಾಲಕರಿಗೆ ಆನ್ಲೈನ್ ಮೂಲಕ ಉಚಿತ ವೇದ ಪಾಠವನ್ನು ನಡೆಸಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದಾರೆ.
ಇದನ್ನೂ ಓದಿ: 58ನೇ ವಯಸ್ಸಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಶಾಸಕ