ಚಾಮರಾಜನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರವಾಸದ ವೇಳೆ ಆಗಮಿಸಿದ್ದ ಬೆಂಗಾವಲು ಪಡೆಯ ಹೆಲಿಕಾಪ್ಟರ್ನಲ್ಲಿ ತಾಂತ್ರಿ ದೋಷ ಕಾಣಿಸಿಕೊಂಡು ಕಳೆದೆರಡು ದಿನದಿಂದ ಹೆಲಿಪ್ಯಾಡ್ನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.
ಇಲ್ಲಿನ ಎಡಪುರ ಮೆಡಿಕಲ್ ಕಾಲೇಜಿಗೆ ಬಂದಿದ್ದ ವಾಯುಸೇನೆಯ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕಳೆದೆರಡು ದಿನದಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಹಲಿಕಾಪ್ಟರ್ನಲ್ಲಿ ಆಯಿಲ್ ಸೋರಿಕೆಯಾದ ಹಿನ್ನೆಲೆ ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗ್ತಿದೆ.
ಬಳಿಕ ವಾಯಸೇನೆಯ ಇನ್ನೊಂದು ಹೆಲಿಕಾಪ್ಟರ್ನಲ್ಲಿ ಆಯಿಲ್ ಮತ್ತು ಇಂಧನ ತರಿಸಲಾಗಿದ್ದು, 5ರಿಂದ 6 ಮಂದಿ ನುರಿತ ತಂತ್ರಜ್ಞರು ಆಗಮಿಸಿ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ.
ಇಂದು ಸಂಜೆ ವೇಳೆಗೆ ಹೆಲಿಕಾಪ್ಟರ್ ದುರಸ್ತಿ ಸಂಪೂರ್ಣವಾಗಲಿದ್ದು, ಹಾರಾಟ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಲಿಕಾಪ್ಟರ್ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿರುವ ಹಿನ್ನೆಲೆ ಹೆಲಿಪ್ಯಾಡ್ ಸಮೀಪಕ್ಕೆ ಜನರ ಪ್ರವೇಶ ನಿಷೇಧಿಸಲಾಗಿದೆ.
ಓದಿ: ಬೆಂಗಾವಲು ಪಡೆ ತಿರಸ್ಕರಿಸಿ ಓಡಾಡುತ್ತಿರುವ ಸಚಿವ ಹಾಲಪ್ಪ ಆಚಾರ್: ಕಾರಣ?