ETV Bharat / state

ಅಕ್ರಮ ದನ ಸಾಗಾಣಿಕೆ ಮೇಲೆ ಸರಣಿ ದಾಳಿ: 8 ಗೋವುಗಳ ರಕ್ಷಣೆ

ಕಸಾಯಿಖಾನೆಗೆ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವಿವಿಧ ಸ್ಥಳಗಳ ಮೇಲೆ ಬೇಗೂರು ಪೊಲೀಸರು ದಾಳಿ ನಡೆಸಿ ಎಂಟು ಹಸುಗಳನ್ನು ರಕ್ಷಿಸಿದ್ದಾರೆ.

author img

By

Published : Oct 12, 2020, 7:48 PM IST

Chamarajanagara
Chamarajanagara

ಚಾಮರಾಜನಗರ : ಕಸಾಯಿಖಾನೆಗೆ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವಿವಿಧ ಸ್ಥಳಗಳ ಮೇಲೆ ಬೇಗೂರು ಪೊಲೀಸರು ಸರಣಿ ದಾಳಿ ನಡೆಸಿರುವ ಘಟನೆ ನಡೆದಿದೆ.

ಯಡಿಯಾಲ ಕ್ರಾಸ್, ಮಾದಪಟ್ಟಣ ಗೇಟ್, ಆಲಹಳ್ಳಿ ಬಳಿ ಪಿಎಸ್ಐ ಪುನೀತ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಲೋಕೇಶ್ ತಂಡ ದಾಳಿ ನಡೆಸಿ 8 ಹಸುಗಳನ್ನು ರಕ್ಷಿಸಿದ್ದಾರೆ.

ಇನ್ನು, ಅಕ್ರಮವಾಗಿ ದನ ಸಾಗಿಸುತ್ತಿದ್ದ ನಂಜನಗೂಡು ತಾಲೂಕಿನ ಶ್ರೀನಿವಾಸ, ಮಹೇಶ್, ಸ್ವಾಮಿನಾಯ್ಕ್, ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಗ್ರಾಮದ ರಂಜಿತ್, ಮಣಿಕಂಠ, ಚಾಮರಾಜನಗರದ ಸಿದ್ಧೀಕ್ ಖಾನ್ ತೆರಕಣಾಂಬಿಯ ಅಬ್ದುಲ್ ರೆಹಮಾನ್ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಸದ್ಯ ಬೇಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ 2 ಟಾಟಾ ಏಸ್, 1 ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.