ETV Bharat / state

ಅಭ್ಯರ್ಥಿ ಗೆಲುವಿನ ಬಗ್ಗೆ 1 ಕೋಟಿ ಬೆಟ್​ಗೆ ಆಹ್ವಾನಿಸಿದ್ದ ಪುರಸಭೆ ಸದಸ್ಯನ ‌ಮನೆ ಮೇಲೆ ಪೊಲೀಸ್ ದಾಳಿ - etv bharat kannada

ಬಿಜೆಪಿ ಶಾಸಕ‌ ನಿರಂಜನಕುಮಾರ್ ಗೆಲ್ಲುತ್ತಾರೆ, ತಾನು 1 ಕೋಟಿ ಬೆಟ್​ ಕಟ್ಟುತ್ತೇನೆ ಎಂದು ಬಾಜಿಗೆ ಆಹ್ವಾನಿಸಿದ್ದ ಪುರಸಭೆ ಸದಸ್ಯನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

police-raided-the-house-of-the-municipal-member-for-invited-to-the-bet
1 ಕೋಟಿ ಬೆಟ್​ಗೆ ಆಹ್ವಾನಿಸಿದ್ದ ಪುರಸಭೆ ಸದಸ್ಯನ ‌ಮನೆ ಮೇಲೆ ಪೊಲೀಸ್ ದಾಳಿ..
author img

By

Published : May 12, 2023, 6:07 PM IST

ಚಾಮರಾಜನಗರ:ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಇತ್ತ ಬಿಜೆಪಿ ಶಾಸಕ‌ ನಿರಂಜನಕುಮಾರ್ ಗೆಲ್ಲುತ್ತಾರೆ ತಾನು 1 ಕೋಟಿ ಬೆಟ್​ ಕಟ್ಟುತ್ತೇನೆಂದು ಬಾಜಿಗೆ ಆಹ್ವಾನಿಸಿದ ಗುಂಡ್ಲುಪೇಟೆ ಪುರಸಭಾ ಸದಸ್ಯನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಿರಂಜನ್ ಪರ ಬೆಟ್ಟಿಂಗ್​ಗೆ ಒಂದು ಕೋಟಿಗೆ ಆಹ್ವಾನ ನೀಡಿದ್ದ ಪುರಸಭೆ ಸದಸ್ಯ ಕಿರಣ್ ಗೌಡ ಮನೆ ಮೇಲೆ ಗುಂಡ್ಲುಪೇಟೆ ಪಟ್ಟಣ ಠಾಣಾ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಬಿಜೆಪಿ ಅಭ್ಯರ್ಥಿ ಪರ ಒಂದು ಕೋಟಿ ಬೆಟ್ಟಿಂಗ್ ಕಟ್ಟುತ್ತೇನೆಂದು ಕಿರಣ್ ವಿಡಿಯೋ ಹರಿಬಿಟ್ಟಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ದಾಳಿ ನಡೆಸಿ ಮನೆಯಲ್ಲಿನ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಪಿಐ ಮುದ್ದುರಾಜ್, ಸಬ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಒಂದು ಎಕರೆ ಜಮೀನು ಬಾಜಿ ಕಟ್ಟುವುದಾಗಿ ಪಂಥಾಹ್ವಾನ ನೀಡಿದ ವ್ಯಕ್ತಿ: ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂ.ಆರ್.ಮಂಜುನಾಥ್ ಗೆಲ್ಲುತ್ತಾರೆ ಎಂದು ಒಂದು ಎಕರೆ ಜಮೀನು ಬಾಜಿಗೆ ಕಟ್ಟುತ್ತೇನೆ ಎಂದು ವ್ಯಕ್ತಿಯೋರ್ವ ಪಂಥಾಹ್ವಾನ ನೀಡಿರುವ ಘಟನೆ ನಡೆದಿದೆ. ಹನೂರು ಪಟ್ಟಣದ ಮೈಸೂರು ಮಾರಮ್ಮ ದೇವಾಲಯ ಸಮೀಪದ ನಿವಾಸಿ ರಂಗಸ್ವಾಮಿ ನಾಯ್ಡು ಎಂಬವರು ಒಂದು ಎಕರೆ ಜಮೀನನ್ನು ಜೆಡಿಎಸ್ ಅಭ್ಯರ್ಥಿ ಪರವಾಗಿ ಬಾಜಿ ಕಟ್ಟಲು ರೆಡಿ ಇದ್ದೇನೆ, ಬಿಜೆಪಿ, ಕಾಂಗ್ರೆಸ್ ನವರು ಸೇರಿದಂತೆ ಯಾರಾದರೂ ಬಾಜಿಗೆ ಬರಬಹುದು ಎಂದು ಆಹ್ವಾನಿಸಿದ್ದಾರೆ.

ಲೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ತಮಗೆ ಸೇರಿದ ಒಂದು ಎಕರೆ ಜಮೀನನ್ನು ಪಣಕ್ಕೆ ಇಡುತ್ತಿದ್ದೇನೆ ಎಂಬ ರೈತನ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇನ್ನು, ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 2 ಕೋಟಿ ಮೌಲ್ಯದ 6 ಎಕರೆ ಹೊಲವನ್ನು ಬಾಜಿ ಕಟ್ಟುತ್ತೇನೆ ಎಂದು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ:ಹೊನ್ನಾಳಿಯಲ್ಲಿ ಗೆಲುವಿನ ಬಗ್ಗೆ 2 ಎಕರೆ ಜಮೀನು ಬಾಜಿ... ತಮಟೆ ಬಾರಿಸಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.