ETV Bharat / state

ನಿವೃತ್ತಿ ಅನ್ನುವಾಗಲೇ ಫಿಟ್ ಆ್ಯಂಡ್ ಫೈನ್ ಎಂದ ಬಂಡೀಪುರದ 'ರಾಣಾ': 2 ವರ್ಷ ಈ ಹಂಟರ್​​ನ ಸೇವೆ ಅಬಾಧಿತ

ಬಂಡೀಪುರ ಅರಣ್ಯ ಪ್ರದೇಶದಲ್ಲಿ‌ ತೇಗ, ಹೊನ್ನೆಯಂತಹ ಸಂಪದ್ಭರಿತ ಮರಗಳಿದ್ದು, ಇವುಗಳ ಮೇಲೆ ಯಾವಾಗಲೂ ಇರುತ್ತಿದ್ದ ಮರಗಳ್ಳರ ಕಣ್ಣು ಈಗ ಪೊಲೀಸ್​ ನಾಯಿ ರಾಣಾನಿಂದ ತಪ್ಪಿದೆ ಎನ್ನಬಹುದು.

Police dog Rana
ಕಾಡುಗಳ್ಳರ ಹಂಟರ್ ಬಂಡೀಪುರದ ರಾಣಾ
author img

By

Published : Sep 3, 2020, 2:05 PM IST

ಚಾಮರಾಜನಗರ: ಕ್ಷಣಾರ್ಧದಲ್ಲಿ ಕಾಡುಗಳ್ಳರನ್ನು, ನಾಡಿಗೆ ಬಂದ ವನ್ಯಜೀವಿಗಳ ಇರುವಿಕೆಯನ್ನು ಪತ್ತೆಹಚ್ಚುತ್ತಿದ್ದ ಬಂಡೀಪುರದ ಸ್ಪೆಷಲ್ ಇನ್ವೇಸ್ಟಿಗೇಟರ್ ರಾಣಾ ನಿವೃತ್ತಿಯಾಗುತ್ತಾನೆ ಎಂದು ಹೇಳುತ್ತಿರುವಾಗಲೇ ತಾನು ಫಿಟ್ ಆ್ಯಂಡ್ ಫೈನ್ ಆಗಿದ್ದಾನೆ. ಇನ್ನೆರೆಡು ವರ್ಷ ಸೇವೆ ಸಲ್ಲಿಸುತ್ತೇನೆ ಎಂದು ಕಾಡುಗಳ್ಳರ ಹಂಟರ್ ಸಂದೇಶ ನೀಡಿದ್ದಾನೆ.

ಕಾಡುಗಳ್ಳರ ಹಂಟರ್ ಬಂಡೀಪುರದ ರಾಣಾ ಸೇವಾ ಅವಧಿ ವಿಸ್ತಾರ..

ಕೆಲವು ದಿನಗಳ ಹಿಂದೆಯಷ್ಟೇ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹುಲಿ ಕೊಂದು ಕಾಲು ಕತ್ತರಿಸಿಕೊಂಡು ಹೋಗಿದ್ದ ಪ್ರಕರಣವನ್ನು ರಾಣಾ ಸಹಾಯದಿಂದ ಅರಣ್ಯಾಧಿಕಾರಿಗಳು ಕೆಲವೇ ತಾಸುಗಳಲ್ಲಿ ಪತ್ತೆ ಹಚ್ಚಿದ್ದರು. ಆ ಪ್ರಕರಣದ ಮೂಲಕ ಬಂಡೀಪುರ ರಾಣಾನ ಚುರುಕುಮತಿ ಮತ್ತೆ ಅನಾವರಣವಾಗುವ ಜೊತೆಗೆ ತಾನೆಷ್ಟು ಫಿಟ್ ಎಂಬುದನ್ನು ತೋರಿಸಿದೆ ಈ ಶ್ವಾನ.

ರಾಣಾನಿಗೆ 8 ವರ್ಷವಾಗುತ್ತಿದ್ದು, ತನ್ನ ಸೂಕ್ಷ್ನ ವಾಸನಾಗ್ರಹಿಕೆಗಳನ್ನು ಕುಂದಿಸಿಕೊಳ್ಳದಿದ್ದರೂ ವಯೋಮಾನಕ್ಕುಗುಣವಾಗಿ ನಿವೃತ್ತಿ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದರು. ಆದರೆ, ಇನ್ನೂ ಕೂಡ ರಾಣಾ ಆರೋಗ್ಯವಂತನಾಗಿರುವುದಲ್ಲದೇ ಆಜ್ಞೆಗಳನ್ನು ಕರಾರುವಕ್ಕಾಗಿ ಪಾಲಿಸುತ್ತಾನೆ. ಹಾಗಾಗಿ ಇನ್ನೆರಡು ವರ್ಷ ರಾಣಾ ಸೇವೆ ಸಲ್ಲಿಸುವುದು ಪಕ್ಕ ಎನ್ನುತ್ತಾರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್.

ರಾಣಾ ಜರ್ಮನ್ ಶೆಫರ್ಡ್ ಜಾತಿಯ ಶ್ವಾನವಾಗಿದ್ದು, ಮಧ್ಯಪ್ರದೇಶದಲ್ಲಿ 2 ವರ್ಷ ತರಬೇತಿ ಪಡೆದಿರುವ ಸಖತ್ ಶಾರ್ಪ್ ಆಗಿದೆ. ಪ್ರಕಾಶ್ ಎಂಬವರು ಈ ರಾಣಾನನ್ನು ನೋಡಿಕೊಳ್ಳುತ್ತಿದ್ದರು. ಈಗ ಕಾಳ ಎಂಬವರು ಶ್ವಾನದ ಮೆಂಟರ್ ಆಗಿದ್ದು, ಇವರನ್ನು ಬಿಟ್ಟು ಬೇರಿನ್ಯಾರ ಮಾತನ್ನು ರಾಣಾ ಕೇಳಲ್ಲ, ಬೇರೆಯವರು ನೀಡಿದ ತಿ‌ನಿಸನ್ನು ಸಹ ತಿನ್ನಲ್ಲ ಈ ಸೂಪರ್ ಡಾಗ್.

ಬೆಳಗ್ಗೆ ಹಾಗೂ ಸಂಜೆ ಒಂದೊಂದು ತಾಸು ತರಬೇತಿ ಪಡೆಯುವ ರಾಣಾ ಯಾವುದೇ ಡಿಸ್ಟರ್ಬೆನ್ಸ್ ಇಲ್ಲದಿದ್ದರೇ 1-2 ತಾಸುಗಳಲ್ಲಿ 30-40 ಕಿ.ಮೀನಲ್ಲೂ ಅಪರಾಧಿಗಳನ್ನು ಪತ್ತೆ ಹಚ್ಚುತ್ತಾನೆ‌. ಹುಲಿಗೆ ಸಂಬಂಧಿಸಿದ 5 ಪ್ರಕರಣಗಳಲ್ಲಿ ರಾಣಾನೇ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ. ಬಂಡೀಪುರ ಅರಣ್ಯ ಪ್ರದೇಶದಲ್ಲಿ‌ ತೇಗ, ಹೊನ್ನೆಯಂತ ಸಂಪದ್ಭರಿತ ಮರಗಳಿದ್ದು, ಇವುಗಳ ಮೇಲೆ ಯಾವಾಗಲೂ ಇರುತ್ತಿದ್ದ ಮರಗಳ್ಳರ ಕಣ್ಣು ಈಗ ರಾಣಾನಿಂದ ತಪ್ಪಿದೆ ಎಂದರೆ ಅತಿಶಯೋಕ್ತಿಯಲ್ಲ ಎನ್ನುತ್ತಾರೆ ರಾಣಾನ ಮೆಂಟರ್ ಕಾಳ ಕಲ್ಕರ್.

ರಾಣಾ ಪತ್ತೆ ಹಚ್ಚಿದ ಪ್ರಕರಣಗಳು:

  • ಹೆಚ್.ಡಿ‌. ಕೋಟೆ ತಾಲೂಕಿನ ಎನ್.ಬೇಗೂರಿನ ಮರಗಳ್ಳತನ​
  • ಮಧುಮಲೆಯ ದೇವರಶೂಲೆ ಅರಣ್ಯದಲ್ಲಿ ನರಹಂತಕ ಹುಲಿಯನ್ನು ಪತ್ತೆಹಚ್ಚಿದ್ದು
  • ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ಚಿರತೆಗೆ ವಿಷ ಹಾಕಿದವರ ಪತ್ತೆ
  • ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆ.
  • ಪ್ರಿನ್ಸ್ ಹುಲಿಯ ಕಳೇಬರ ಪತ್ತೆ.
  • ನಾಗರಹೊಳೆಯ ಡಿ.ಬಿ‌. ಕುಪ್ಪೆಯಲ್ಲಿ ಮೃತಪಟ್ಟ ಜಿಂಕೆಯನ್ನು ಪತ್ತೆ ಹಚ್ಚಿದ್ದು.
  • ಮೈಸೂರಿನ ಹಾರೋಹಳ್ಳಿಯ ಹುಲಿ ಸಾವು ಪ್ರಕರಣ ಪತ್ತೆ.
  • ನಾಗರಹೊಳೆಯ ಅಂತರಸಂತೆಯಲ್ಲಿ ದೋಣಿ ಕದ್ದವರನ್ನು ಪತ್ತೆಹಚ್ಚಿದ್ದು.
  • ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ನಾಡಿಗೆ ಬರುತ್ತಿದ್ದ ಹುಲಿಯನ್ನು ಪತ್ತೆಹಚ್ಚಿದ್ದು.
  • ಹುಣಸೂರಿನ ಸತ್ತಳ್ಳಿಯಲ್ಲಿ ಹುಲಿ ಸಾವಿನ ಪ್ರಕರಣ ಭೇದಿಸಿದ್ದು.
  • ಗುಂಡ್ಲುಪೇಟೆಯ ಪಾರ್ವತಿ ಬೆಟ್ಟದಲ್ಲಿ ಹುಲಿ ಹಾಗೂ ಚಿರತೆ ಮೃತಪಟ್ಟ ಪ್ರಕರಣದಲ್ಲಿ ಸಹಾಯ.
  • ಗುಂಡ್ಲುಪೇಟೆಯಲ್ಲಿ ಮೃತಪಟ್ಟ ಚಿರತೆ ಪ್ರಕರಣದಲ್ಲಿ ಸಹಾಯ.

ಇಷ್ಟು ಪ್ರಕರಣಗಳು ಸೇರಿದಂತೆ 15 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಣಾ ಬಂಡೀಪುರದ ಮುಕುಟಮಣಿಯಾಗಿದೆ. ಇನ್ನೂ ಎರಡು ವರ್ಷ ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿರಲಿದ್ದಾನೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ಅರಣ್ಯಾಧಿಕಾರಿಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.