ಚಾಮರಾಜನಗರ: ಜ್ವರ ಎಂದು ಆಸ್ಪತ್ರೆಗೆ ತೆರಳಿದ್ದ 16 ವರ್ಷ ಬಾಲಕಿ ಗರ್ಭಿಣಿಯಾಗಿದ್ದ ಸಂಗತಿ ಬೆಳಕಿಗೆ ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಯಳಂದೂರು ತಾಲೂಕಿನ ಕೋಳಿಫಾರ್ಮ್‌ವೊಂದರಲ್ಲಿ ಕುಟುಂಬದ ಜತೆಗೆ ವಾಸವಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪರಿಣಾಮ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ. ಬಿಹಾರ ಮೂಲದ ಕೂಲಿ ಕಾರ್ಮಿಕರು ತಿಂಗಳ ಹಿಂದೆ ಯಳಂದೂರು ತಾಲೂಕಿನ ಕೋಳಿಫಾರ್ಮ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಬಾಲಕಿಗೆ ತೀವ್ರವಾದ ಜ್ವರ ಕಾಣಿಸಿಕೊಂಡ ಹಿನ್ನೆಲೆ ತಂದೆ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ಸಮಯದಲ್ಲಿ ಈ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ನಂತರ ಬಾಲಕಿಯನ್ನು ಚಾಮರಾಜನಗರ ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ, ಕುಟುಂಬದ ಜತೆಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು