ETV Bharat / state

ಬಂಡೀಪುರ ಕಾಡಲ್ಲಿ ಒಂದೂವರೆ ತಾಸು ಪ್ರಧಾನಿ ಸಫಾರಿ

ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ. ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ, ಅಂಚೆ ಚೀಟಿ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬಂಡೀಪುರ ಕಾಡಲ್ಲಿ ಪ್ರಧಾನಿ ಮೋದಿ ಸಫಾರಿ
ಬಂಡೀಪುರ ಕಾಡಲ್ಲಿ ಪ್ರಧಾನಿ ಮೋದಿ ಸಫಾರಿ
author img

By

Published : Apr 9, 2023, 7:18 AM IST

Updated : Apr 9, 2023, 2:16 PM IST

ಚಾಮರಾಜನಗರ: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಓಪನ್ ಜೀಪ್​​ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ. ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮೋದಿ ಸಂಚರಿಸುತ್ತಿದ್ದಾರೆ. ಸಫಾರಿ ವೇಳೆ ಪ್ರಧಾನಿ ಮೋದಿ ಅವರು ಆನೆ, ಜಿಂಕೆ, ಕಡವೆ, ಕಾಡೆಮ್ಮೆ ನೋಡಿದ್ದಾರೆ ಎಂದು ತಿಳಿದುಬಂದಿದೆ‌‌‌‌. ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಬಳಿಕ ತಮಿಳುನಾಡಿನ ತೆಪ್ಪಕಾಡಿ ನ ಆನೆ ಶಿಬಿರಕ್ಕೆ ಭೇಟಿ ಕೊಡುತ್ತಿದ್ದಾರೆ.

ಕಳೆದ ರಾತ್ರಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 7.30ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್​​ನಲ್ಲಿ ಬಂದಿಳಿದಿದ್ದರು.

ಅರಣ್ಯ ಇಲಾಖೆ ದಿರಿಸಿನಲ್ಲಿ ಮಿಂಚಿದ ನಮೋ.. ವಿಶೇಷ ಹೆಲಿಕಾಪ್ಟರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿದ್ದರು. ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್​​ ಅನ್ನು ಮೋದಿ ಧರಿಸುವ ಮೂಲಕ ಮಿಂಚಿದ್ದಾರೆ.

ಈ ವೇಳೆ ಅಂಚೆ ಚೀಟಿ ಬಿಡುಗಡೆ, ಬಂಡೀಪುರದಲ್ಲಿ ಹಳೇ ಸಫಾರಿ ಕೇಂದ್ರದ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಸರಿಸುಮಾರು 15 ಕಿ.ಮೀ ಸಫಾರಿ ನಡೆಸಲಿದ್ದಾರೆ. ಬೋಳಗುಡ್ಡ ಎಂಬ ಎತ್ತರದ ಪ್ರದೇಶಕ್ಕೆ ಏರಿ ಇಡೀ ಅರಣ್ಯ ಪ್ರದೇಶವನ್ನು ಕಣ್ತುಂಬಿಕೊಳ್ಳಲ್ಲಿರುವ ಮೋದಿ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ‌. ಮೈಸೂರಿನಲ್ಲಿ ಹುಲಿ ಗಣತಿ ಅಂಕಿ-ಅಂಶ ಬಿಡುಗಡೆ ಮಾಡಲಿರುವ ಮೋದಿ, ಈ ಬಾರಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ1 ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ್ಯಾಂಕಿನಲ್ಲಿ ಬಂಡೀಪುರ ನಂ 1 ಸ್ಥಾನ ಗಳಿಸುವ ನಿರೀಕ್ಷೆ ಇದೆ. ಮೋದಿ ಸಫಾರಿ ವೇಳೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಅರಣ್ಯಾಧಿಕಾರಿಗಳು ಭಾಗಿಯಾಗಲಿದ್ದಾರೆ.

PM modi in Bandipur
ಬಂಡೀಪುರದಲ್ಲಿ ಪ್ರಧಾನಿ ಮೋದಿ

ಎಲೆಕ್ಷನ್ ಎಫೆಕ್ಟ್: ಜನರ ಭಾಗಿಯಿಲ್ಲದ ಮೋದಿ ಬಂಡೀಪುರ ವಿಸಿಟ್!!

ಹೆದ್ದಾರಿ ಬಂದ್.. ಬಂಡೀಪುರಕ್ಕೆ ಬಂದಿಳಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಜನರ ಪ್ರವೇಶವನ್ನು ಗುಂಡ್ಲುಪೇಟೆಯ ಊಟಿ ಗೇಟ್​​ನಲ್ಲೇ ತಡೆಯಲಾಗುತ್ತಿದೆ. ಮೋದಿ ಅವರು ಗುಂಡ್ಲುಪೇಟೆಗೆ ಬಂದರೂ ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರುತ್ತಿಲ್ಲ.

PM modi in Bandipur
ಬಂಡೀಪುರದಲ್ಲಿ ಪ್ರಧಾನಿ ಮೋದಿ

ಇನ್ನು, 15 ಕಿ.ಮೀ. ಸಫಾರಿ ನಡೆಸಲಿರುವ ಪ್ರಧಾನಿ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ, ಅಂಚೆ ಚೀಟಿ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಪಿಎಂಗೆ ಸಾಥ್ ಕೊಡಲಿದ್ದಾರೆ.

ಸುವರ್ಣ ಸಂಭ್ರಮದಲ್ಲಿ ಹುಲಿ ಸಂರಕ್ಷಿತ ಬಂಡೀಪುರ.. ಅವಸಾನದತ್ತ ಸಾಗಿದ್ದ ಹುಲಿ ಸಂತತಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1973 ರಲ್ಲಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಪ್ರಾಜೆಕ್ಟ್ ಟೈಗರ್ ಯೋಜನೆ ಆರಂಭಿಸಿದ್ದರು. ಅಂದು ಆರಂಭಗೊಂಡ ಹುಲಿ ರಕ್ಷಿತ ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದ್ದು, ಈಗ ಸುವರ್ಣ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಬಂಡೀಪುರಕ್ಕೆ ಭೇಟಿ ಕೊಡುತ್ತಿದ್ದಾರೆ.

  • Spent the morning at the scenic Bandipur Tiger Reserve and got a glimpse of India’s wildlife, natural beauty and diversity. pic.twitter.com/X5B8KmiW9w

    — Narendra Modi (@narendramodi) April 9, 2023 " class="align-text-top noRightClick twitterSection" data=" ">

ಮಧುಮಲೈನಲ್ಲಿ ಬೊಮ್ಮ- ಬೆಳ್ಳಿ ದಂಪತಿಗೆ ಸನ್ಮಾನ.. ಬಂಡೀಪುರ ವಲಯದಲ್ಲಿ ಸಫಾರಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಇಲ್ಲಿ ಆನೆ ಮರಿ ಉಳಿಸಿದ ಹಾಗೂ ಆಸ್ಕರ್​ ಪಡೆದ ಎಲಿಫೆಂಟ್ ವಿಸ್ಪರರ್ಸ್​ ಸಾಕ್ಷ್ಯಚಿತ್ರದ ಪಾತ್ರಧಾರಿಗಳಾದ ಬೊಮ್ಮ- ಬೆಳ್ಳಿ ದಂಪತಿಯನ್ನು ಸನ್ಮಾನಿಸಲಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಪಿಎಂ ವನ್ಯಜೀವಿ ಸಫಾರಿ: ಪ್ರಧಾನಿ ಮೋದಿ ಬಂಡೀಪುರವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ..?

Last Updated : Apr 9, 2023, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.