ETV Bharat / state

ದಯವಿಟ್ಟು ಮುನ್ನೆಚ್ಚರಿಕೆ ವಹಿಸಿ ಕೊರೊನಾ ತಡೆಗಟ್ಟಿ: ಒಮನ್​ನಿಂದ ಕನ್ನಡಿಗನ ಸಂದೇಶ

ಒಮನ್​ ದೇಶದ ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿರುವ ಕೊಡಗಿನ ಸುರೇಶ್ ಎಂಬವವರು ವಿಡಿಯೋ ಮಾಡಿದ್ದು ಭಾರತೀಯರು ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

Please take care of corona Oman kannadiga request
ಓಮನ್​ನಿಂದ ಕನ್ನಡಿಗನ ಮನವಿ
author img

By

Published : Mar 26, 2020, 12:45 PM IST

ಚಾಮರಾಜನಗರ: ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ದಯವಿಟ್ಟು ಪಾಲಿಸಿ ಎಂದು ಒಮನ್ ನಿಂದ ಕನ್ನಡಿಗರೊಬ್ಬರು ನೀಡಿರುವ ಸಂದೇಶ ವೈರಲ್ ಆಗಿದೆ.

ಒಮನ್​ನಿಂದ ಕನ್ನಡಿಗನ ಮನವಿ

ಕೊಡಗಿನ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದ ಸುರೇಶ್ ಎಂಬವವರು ಒಮನ್ ನಿಂದ ವಿಡಿಯೋ ಮೂಲಕ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ಇರುವ ಒಮನ್ ದೇಶದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಳ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ ನಾನು ಇಲ್ಲಿ ಚೆನ್ನಾಗಿದ್ದೇನೆ. ಶಾಲಾ-ಕಾಲೇಜು, ಸೂಪರ್ ಮಾರ್ಕೆಟ್, ಮಾಲ್​ಗಳನ್ನ ಬಂದ್ ಮಾಡಲಾಗಿದೆ. ವಿದೇಶದಿಂದ ಬಂದವರಿಗಾಗಿ ಮತ್ತು ಕೊರೊನಾ ಪೀಡಿತರಿಗೆ ವಿಶಾಲ ಜಾಗದಲ್ಲಿ ಪ್ರತ್ಯೇಕ ಶೆಡ್ ಗಳ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಟಲಿಯಲ್ಲಿ ದಿನ ನಿತ್ಯ ಕೊರೊನಾದಿಂದ ಜನ ಸಾಯುತ್ತಿದ್ದಾರೆ.‌ ನನ್ನ ಮನವಿ ಇಷ್ಟೇ ಭಾರತದಲ್ಲಿ ಈಗಷ್ಟೇ ಶುರುವಾಗಿದೆ. ಆರಂಭದಲ್ಲೆ ಕೊರೊನಾ ಸೋಂಕು ಕಡಿಮೆ ಮಾಡಬೇಕಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಲೇಬೇಕಿದೆ. ಅದಕ್ಕಾಗಿ ಮುತುವರ್ಜಿ ವಹಿಸಿ ಎಂದು ಒಮನ್ ದೇಶದ ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಮನವಿ‌ ಮಾಡಿಕೊಂಡಿದ್ದಾರೆ.

ಹೊರ ದೇಶದಲ್ಲಿದ್ದರೂ ತನ್ನ ತಾಯ್ನಾಡಿನ ಬಗ್ಗೆ ಕಳಕಳಿ ಹೊಂದಿರುವ ಯುವಕನ ಈ ವಿಡಿಯೋ ಬಗ್ಗೆ ನೆಟ್ಟಿಗರು ಮೆಚ್ಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.