ETV Bharat / state

ಸ್ಫೋಟಕ ಸಾಮಗ್ರಿ ಅಕ್ರಮ ಸಾಗಣೆ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ - ಚಾಮರಾಜನಗರ ಅಪರಾಧ ಸುದ್ದಿ

ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

arrest
ಇಬ್ಬರ ಬಂಧನ
author img

By

Published : May 13, 2020, 12:15 PM IST

ಕೊಳ್ಳೇಗಾಲ: ಪರವಾನಗಿ ಇಲ್ಲದೆ ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ಶ್ರೀನಿವಾಸ್, ಅಭಿಷೇಕ್ ಎಂಬಿಬ್ಬರನ್ನು ಸತ್ತೇಗಾಲ ಚೆಕ್​​​ಪೋಸ್ಟ್​​​ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮಂಗಳವಾರ (ಮೇ​ 12) ಮಧ್ಯರಾತ್ರಿ ಮಳವಳ್ಳಿ ತಾಲೂಕಿನ ಕಡೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಪೊಲೀಸರು ಪ್ರಶ್ನಿಸಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕಾರು ಪರಿಶೀಲಿಸಿದಾಗ 22 ಜಿಲೆಟಿನ್ ಸ್ಟಿಕ್ಸ್​ ಹಾಗೂ 22 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್​​ಗಳಿದ್ದವು. ಇವರ ಬಳಿ ಅಂತರ್ ಜಿಲ್ಲೆಗೆ ಪ್ರವೇಶಿಸುವ ಪಾಸ್ ಕೂಡ ಇರಲಿಲ್ಲ.

ಬೂದು ಗಟ್ಟೆಯಲ್ಲಿರುವ ತಮ್ಮ ಜಮೀನಿನಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಈ ಸಾಮಗ್ರಿ ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಇದಕ್ಕೆ ಪರವಾನಗಿ ಹೊಂದಿರಲಿಲ್ಲ. ಹೀಗಾಗಿ ಕಾರು ವಶಪಡಿಸಿಕೊಂಡ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.