ETV Bharat / state

ಇವರು ಬಡವರಾದರೇನು.. ಆರೋಗ್ಯ, ಶಿಕ್ಷಣ, ಸಂಸ್ಕಾರದಲ್ಲಿ 'ಯೋಗ'ವಂತರು..

ಇಂದು ವಿಶ್ವ ಯೋಗ ದಿನ. ಯೋಗ ಕೇವಲ ಆರೋಗ್ಯ ಕ್ರಮ ಮಾತ್ರವಲ್ಲದೆ, ಸಂಸ್ಕಾರಯುತ ಜೀವನದ ಒಂದು ಭಾಗವೂ ಹೌದು. ಸೇವಾಶ್ರಮವೊಂದು ಬಡ,ನಿರ್ಗತಿಕ ವಿದ್ಯಾರ್ಥಿಗಳನ್ನು ಪೋಷಿಸಿ ಅವರಿಗೆ ಯೋಗ ಶಿಕ್ಷಣ ನೀಡುವ ಮಹತ್ಕಾರ್ಯ ಮಾಡುತ್ತಿದೆ..

A Sevashrama Teaching Life Education through the Yoga
ಯೋಗದ ಮೂಲಕ ಜೀವನ ಪಾಠ ಹೇಳಿಕೊಡುತ್ತಿರುವ ಸೇವಾಶ್ರಮ
author img

By

Published : Jun 21, 2020, 4:01 PM IST

ಚಾಮರಾಜನಗರ : ಈ ಆಶ್ರಮದಲ್ಲಿ ಕಲಿಯುತ್ತಿರುವ ಮಕ್ಕಳು ಬಡವರೇನೋ ನಿಜ. ಇವರ ಪಾಲಕರು ಆರ್ಥಿವಾಗಿ ಕಷ್ಟದಲ್ಲಿರಬಹುದು. ಆದರೆ, ಶಿಕ್ಷಣ, ಆರೋಗ್ಯ ಹಾಗೂ ಸಂಸ್ಕಾರದಲ್ಲಿ ನಿಜಕ್ಕೂ ಇಲ್ಲಿನ ವಿದ್ಯಾರ್ಥಿಗಳು 'ಯೋಗ'ವಂತರು.

ನಗರದ ಪಾರ್ವತಿ ಬಾಲ ಸೇವಾಶ್ರಮವು ಅನಾಥ ಮಕ್ಕಳು, ಬಡ ಹೆಣ್ಣು ಮಕ್ಕಳಿಗೆ ಸಂಸ್ಕಾರ, ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬರುತ್ತಿದೆ. ಮಗು ಆಶ್ರಮಕ್ಕೆ ಬಂದ ದಿನದಿಂದಲೇ ಯೋಗಾಭ್ಯಾಸ, ಧ್ಯಾನದ ಪಾಠ ಶುರುವಾಗುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಠಿಣ ಯೋಗಾಭ್ಯಾಸಗಳನ್ನು ಮಾಡುತ್ತಿದ್ದಾರೆ.

ಯೋಗದ ಮೂಲಕ ಜೀವನ ಪಾಠ ಹೇಳಿಕೊಡುತ್ತಿರುವ ಸೇವಾಶ್ರಮ..

1992ರಲ್ಲಿ ವಾಸುದೇವರಾವ್ ಎಂಬುವರಿಂದ ಈ ಸೇವಾಶ್ರಮ ಪ್ರಾರಂಭವಾಗಿದೆ. ಪ್ರಾರಂಭದಿಂದಲೇ ಇಲ್ಲಿನ ಮಕ್ಕಳಿಗೆ ಯೋಗಾಭ್ಯಾಸ ಕಡ್ಡಾಯವಾಗಿದೆ. ಮೂರು-ನಾಲ್ಕು ಮಕ್ಕಳು ಆಶ್ರಮದಲ್ಲಿದ್ದಾರೆ. ಅವರೂ ಯೋಗ ಮಾಡಲು ಪ್ರಾರಂಭಿಸಿದ್ದಾರೆ. ಭಗವದ್ಗೀತೆ-ಯೋಗ ಇಲ್ಲಿನ ವಿದ್ಯಾರ್ಥಿಗಳ ನಿತ್ಯ ಕಲಿಕೆಯ ವಿಷಯಗಳಾಗಿವೆ ಎನ್ನುತ್ತಾರೆ ಸೇವಾಶ್ರಮದ ಮಾತಾಜಿ ಚಂದ್ರಕಲಾ.

ಮಕ್ಕಳಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ ಮತ್ತು ಶಿಕ್ಷಣ. ಯೋಗ ಕಲಿಕೆಯಿಂದ ಮಕ್ಕಳು ಲವಲವಿಕೆಯಿಂದ ಇರುತ್ತಾರೆ. ಅಧ್ಯಯನ ಮಾಡಲು ಏಕಾಗ್ರತೆಯೂ ಬರುತ್ತದೆ. ‌ಇಲ್ಲಿನ ಮಕ್ಕಳ ಪಾಲಕರು ಬಡವರಿರಬಹುದು. ಆದರೆ, ಮಕ್ಕಳು‌ ಮುಖ್ಯವಾಹಿನಿಗೆ ಬಂದಿದ್ದಾರೆ. ಯೋಗಾಭ್ಯಾಸದ ಮೂಲಕವೇ‌ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಯೋಗ ನಮ್ಮ ಜೀವನದ ಮುಖ್ಯ ಭಾಗವಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಚಂದ್ರಕಲಾ.

ರಾಜ್ಯದ 26 ಪ್ರದೇಶಗಳ ಮಕ್ಕಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಎಲ್ಲಾ ಮಕ್ಕಳು ಕಠಿಣ ಯೋಗದ ಆಸನಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ. ಇನ್ನೊಂದು ವಿಶೇಷವೆಂದ್ರೆ, ಇಲ್ಲಿ ಆಶ್ರಯ ಪಡೆದಿದ್ದ 6 ವಿದ್ಯಾರ್ಥಿಗಳಿಗೆ ಸೇವಾಶ್ರಮವೇ ವಿವಾಹ ಮಾಡಿ ಕೊಟ್ಟಿದೆ. ಅದೂ ಯೋಗ ಶಿಕ್ಷಕರೊಂದಿಗೇ ಮದುವೆ ಮಾಡಿಕೊಡಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಇತರರಿಗೂ ಯೋಗ ಪಾಠ ಮಾಡುತ್ತಿದ್ದಾರೆ.

ಲಾಕ್‌ಡೌನ್​ ವೇಳೆ ಶಾಲೆಗೆ ರಜೆಯಾದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಭಗವದ್ಗೀತೆ ಮತ್ತು ಯೋಗಕ್ಕೆ ಹೆಚ್ಚಿ‌ನ ಪ್ರಾಮುಖ್ಯತೆ ಕೊಟ್ಟು ನಿತ್ಯ 4 ತಾಸು ಯೋಗಾಭ್ಯಾಸ ಮಾಡುವ ಮೂಲಕ ಯೋಗದ ಮೇಲಿರುವ ತಮ್ಮ ಉತ್ಸಾಹ ತೋರ್ಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.