ETV Bharat / state

Operation Elephant.. ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ಪುಂಡಾನೆ ಸೆರೆಗೆ ಕಾರ್ಯಾಚರಣೆ - Operation of elephant in Ponnachi village of Chamarajanagar

ಗ್ರಾಮಕ್ಕೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿದ್ದ ಎರಡು ಪುಂಡಾನೆಗಳು- ಸೆರೆ ಹಿಡಿಯಲು ಕಾರ್ಯಾಚರಣೆ ಶುರು- ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಕಾರ್ಯಾಚರಣೆ

operation-of-elephant-in-ponnachi-village-of-chamarajanagar
ಆಪರೇಷನ್ ಎಲಿಫ್ಯಾಂಟ್ : ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ಪುಂಡಾನೆ ಸೆರೆಗೆ ಕಾರ್ಯಾಚರಣೆ
author img

By

Published : Jul 17, 2022, 6:16 PM IST

ಚಾಮರಾಜನಗರ : ಗ್ರಾಮಕ್ಕೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿದ್ದ ಎರಡು ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾದಪ್ಪನ ಬೆಟ್ಟದ ತಪ್ಪಲಿನ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆಯುತ್ತಿದೆ. ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ನೇತೃತ್ವದಲ್ಲಿ ಎರಡು ಸಾಕಾನೆಗಳ ಮೂಲಕ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆಪರೇಷನ್ ಎಲಿಫ್ಯಾಂಟ್ : ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ಪುಂಡಾನೆ ಸೆರೆಗೆ ಕಾರ್ಯಾಚರಣೆ

ಸದ್ಯ ಒಂದು ಆನೆಯನ್ನು ಗುರುತಿಸಿ ಅದನ್ನು ಸೆರೆ ಹಿಡಿಯುವ ಕಾರ್ಯ ನಡೆಯುತ್ತಿದೆ. ಸಂಜೆ ವೇಳೆಗೆ, ಅರವಳಿಕೆ ಮದ್ದು ಕೊಟ್ಟು ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಜಿಪಿಎಸ್ ಮೂಲಕ ಆನೆ ಗ್ರಾಮದ ಸರಹದ್ದಿಗೆ ಬಂದಾಗ ಮತ್ತೆ ಅದನ್ನು ಕಾಡಿಗಟ್ಟುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.

ಪೊನ್ನಾಚಿ ಗ್ರಾಮದಲ್ಲಿ ಈ ಎರಡು ಪುಂಡಾನೆಗಳ ಆಟಾಟೋಪಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಡಿಸಿ ಚಾರುಲತಾ ಸೋಮಲ್ ಅವರು ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರೇಡಿಯೋ ಕಾಲರ್ ಅಳವಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಆಪರೇಷನ್ ಎಲಿಫ್ಯಾಂಟ್ ಕಾರ್ಯಾಚರಣೆ ಇಂದು ಬೆಳಗ್ಗೆಯಿಂದ ನಡೆಯುತ್ತಿದ್ದು, ನಾಳೆಯೂ ನಡೆಯುವ ಸಾಧ್ಯತೆ ಇದೆ.

ಓದಿ : ಬೆಂಗಳೂರಿನ 243 ವಾರ್ಡ್‍ಗಳ ಜನತೆಗೆ ಗುಡ್​ ನ್ಯೂಸ್​.. ಶೀಘ್ರದಲ್ಲೇ ‘ನಮ್ಮ ಕ್ಲಿನಿಕ್’ ಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.