ETV Bharat / state

ಜಮೀನುಗಳಲ್ಲಿ ನಿಂತ ಮಳೆ ನೀರು: ಈರುಳ್ಳಿ ಬಿತ್ತನೆ ಮಾಡಿದ್ದ ರೈತರ ಕಣ್ಣೀರು! - Onion loss by rain in chamarajanagar news

ಚಾಮರಾಜನಗರ ತಾಲೂಕಿನ ವಿವಿಧೆಡೆ ಸುರಿದ ಭಾರೀ ಮಳೆ ಪರಿಣಾಮ ಕೋಡಿಮೋಳೆ ಗ್ರಾಮದ ಹತ್ತಾರು ರೈತರ ಜಮೀನುಗಳಲ್ಲಿ ಎರಡು ಅಡಿ ನೀರು ನಿಂತಿದ್ದು, ಸಾಲ ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದ ಅನ್ನದಾತರು ಇದೀಗ ಕಂಗಾಲಾಗಿದ್ದಾರೆ.

Onion loss by rain in chamarajanagar
ಜಮೀನುಗಳಲ್ಲಿ ನಿಂತ ಮಳೆನೀರು
author img

By

Published : Jul 7, 2021, 9:41 PM IST

ಚಾಮರಾಜನಗರ: ಚಾಮರಾಜನಗರ ತಾಲೂಕಿನ ವಿವಿಧೆಡೆ ಇಂದು ಸುರಿದ ಭಾರೀ ಮಳೆ ಈರುಳ್ಳಿ ಬೆಳೆಗಾರರರಲ್ಲಿ ಕಣ್ಣೀರು ತರಿಸಿದ್ದು, ಇದೀಗ ಈರುಳ್ಳಿ ಬೆಳೆ ಕೈ ಕೊಡುವ ಆತಂಕ ಮನೆ ಮಾಡಿದೆ.

ಜೋರು ಮಳೆ ಸುರಿದ ಪರಿಣಾಮ ಕೋಡಿಮೋಳೆ ಗ್ರಾಮದ ಹತ್ತಾರು ರೈತರ ಜಮೀನುಗಳಲ್ಲಿ ಎರಡು ಅಡಿ ನೀರು ನಿಂತಿದ್ದು ಸಾಲ ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದವರು ಈಗ ಇಳುವರಿ ಕಳೆದುಕೊಳ್ಳುವ ಜೊತೆಗೆ ಸಂಪೂರ್ಣ ಬೆಳೆಯೇ ಕೈ ಕೊಡುವ ದುಗುಡ ಹೊರಹಾಕಿದ್ದಾರೆ. ಕೆಲವು ಗ್ರಾಮಗಳ ಅರಿಶಿಣ ಬೆಳೆಗಾರರಲ್ಲೂ ಇದೇ ಪರಿಸ್ಥಿತಿ ಅತೀ ತೇವಾಂಶದಿಂದ ಫಸಲು ನಷ್ಟವಾಗುವ ಭೀತಿ ಎದುರಿಸುತ್ತಿದ್ದಾರೆ.

ಜಮೀನುಗಳಲ್ಲಿ ನಿಂತ ಮಳೆನೀರು

ಚಿನ್ನವೆಲ್ಲಾ ಅಡವಿಟ್ಟು ಈರುಳ್ಳಿ ಬಿತ್ತನೆ ಮಾಡಿದ್ದೆವು, ಈಗ ಅಕಾಲಿಕ ಮಳೆಯಿಂದಾಗಿ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ಬೆಳೆ ಕೈ ಸೇರುವುದು ಅನುಮಾನ, ಮುಂದೆ ಏನು ಮಾಡಬೇಕೆಂದು ತೋಚುತ್ತಿಲ್ಲ, ಪರಿಹಾರ ಒದಗಿಸಿಕೊಡಬೇಕೆಂದು ಕೋಡಿಮೋಳೆ ಗ್ರಾಮದ ಶ್ರೀನಿವಾಸ್ ಅಳಲು ತೋಡಿಕೊಂಡಿದ್ದಾರೆ.

ಇನ್ನು, ಇಂದು ಚಾಮರಾಜನಗರ, ಗುಂಡ್ಲುಪೇಟೆ ಹಲವು ಭಾಗಗಳಲ್ಲಿ ಇಂದು ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಎರಡು ಮೂರು ದಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿನಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.