ETV Bharat / state

ಕೊರೊನಾಗೆ ಕೊಳ್ಳೇಗಾಲದಲ್ಲಿ ವೃದ್ಧ ಬಲಿ: 3ಕ್ಕೇರಿದ ಸಾವಿನ ಸಂಖ್ಯೆ - ಕೊಳ್ಳೇಗಾಲ ಕೊರೊನಾ ಲೆಟೆಸ್ಟ್ ನ್ಯೂಸ್​

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಕೊರೊನಾಗೆ ವೃದ್ಧ ಸಾವನ್ನಪ್ಪಿರುವ ಘಟನೆ ನಡೆದಿದೆ.

Old man died by corona at Kollegala
ಕೊರೊನಾ ಸೋಂಕಿನಿಂದ ಕೊಳ್ಳೇಗಾಲದಲ್ಲಿ ವೃದ್ಧ ಸಾವು
author img

By

Published : Jul 13, 2020, 5:36 PM IST

ಕೊಳ್ಳೇಗಾಲ(ಚಾಮರಾಜನಗರ): ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧರೋರ್ವರು ಕೊರೊನಾದಿಂದ ಅಸುನೀಗಿದ್ದು, ತಾಲೂಕಿನಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ತಾಲೂಕಿನ ಪಾಳ್ಯ ಗ್ರಾಮದ‌ 65 ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದು, ಜ್ವರದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗೆಗಾಗಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕೊರೊನಾ ಪರೀಕ್ಷೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದು, ಅವರ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

ಮೃತದೇಹವನ್ನು ಸರ್ಕಾರದ ವಶಕ್ಕೆ ಕೊಡಲಾಗಿದ್ದು, ಚಾಮರಾಜನಗರಕ್ಕೆ ರವಾನಿಸಲಾಗಿದೆ. ವೃದ್ಧನ ಕುಟುಂಬಸ್ಥರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.