ETV Bharat / state

ಕೊರೊನಾಗೆ ನೋ ವರಿ, ಮಾಸ್ಕ್ ದೂರ; ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ?

ಕೋವಿಡ್ ತಡೆಗೆ ಸರ್ಕಾರ ಬಿಗಿ ನಿಯಮಗಳನ್ನು ಜಾರಿ ಮಾಡಿದ್ದರೂ ಜನರು ಯಾವುದೇ ಭೀತಿ ಇಲ್ಲದೆ ಗುಂಪು ಗುಂಪಾಗಿ ಅಗತ್ಯ ವಸ್ತುಗಳ ಖರೀದಿ ಹಾಗೂ ಓಡಾಟದಲ್ಲಿ ತೊಡಗಿಕೊಂಡಿದ್ದಾರೆ. ಜನರು ಕನಿಷ್ಠ ಮಾಸ್ಕ್ ಧರಿಸುವುದು ಕೂಡ ಮರೆತಂತಿದ್ದು ಅರಿವು ಮೂಡಿಸಬೇಕಾದ ಅಧಿಕಾರಿಗಳು ಸುಮ್ಮನಿದ್ದಾರೆ.

ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ
ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ
author img

By

Published : Mar 26, 2021, 5:04 PM IST

Updated : Mar 27, 2021, 11:14 AM IST

ಚಾಮರಾಜನಗರ: ಕೊರೊನಾ ಎರಡನೇ ಅಲೆ, ತಮಿಳುನಾಡು ಹಾಗೂ ಕೇರಳಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್​ಗಳ ಮಧ್ಯೆಯೂ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಸಂಚರಿಸುತ್ತಿದ್ದು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಾಗಲಿ, ನಗರಸಭೆಯಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.

ಪ್ರಾರಂಭದಲ್ಲಿದ್ದ ಆತಂಕ ಇದೀಗ ಕಡಿಮೆಯಾಗಿದ್ದು ಡೋಂಟ್ ಕೇರ್ ಮನೋಭಾವ ಪ್ರದರ್ಶನವಾಗುತ್ತಿದೆ. ನಗರಸಭೆ ಅಧಿಕಾರಿಗಳು ಮಾಸ್ಕ್ ಧಾರಣೆ ನಿಯಮದ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿಲ್ಲ. ಬುಧವಾರವಷ್ಟೇ ಜಿಲ್ಲಾಧಿಕಾರಿ ಸಭೆ, ಸಮಾರಂಭಗಳಿಗೆ ಸೀಮಿತ ಸಂಖ್ಯೆಯ ವ್ಯಕ್ತಿಗಳನ್ನು ಸೇರಿಸಬೇಕು, ಅನುಮತಿ ಪಡೆಯಬೇಕೆಂದು ಸೂಚಿಸಿದ್ದು, ಕನಿಷ್ಠ ಮಾಸ್ಕ್ ಅನ್ನೇ ಧರಿಸದ ಜನರು ಡಿಸಿ ನಿಯಮ ಪಾಲಿಸುವರಾ ಎಂಬ ಪರಿಸ್ಥಿತಿ ಇದೆ.

ಕೊರೊನಾ ಎರಡನೇ ಅಲೆ ನಡುವೆಯೂ ಮಾಸ್ಕ್ ಕೂಡ ಬೇಡ ರೀ ಅನ್ನುವಂತಿದೆ ಜನರ ನಡೆ

ಕೋವಿಡ್ ಆರಂಭದ ಹೊಸ್ತಿಲಿನಲ್ಲಿ ಬಿಗಿ ನಿಯಮ, ತೀವ್ರ ಕಟ್ಟೆಚ್ಚರದ ಪರಿಣಾಮ ಕೊರೊನಾ ಸೋಂಕು ಪತ್ತೆಯಾಗದ ಕರ್ನಾಟಕದ ಏಕೈಕ ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿ ಈಗ ವಾತಾವರಣವೇ ಬೇರೆಯಾಗಿದ್ದು ಪ್ರವಾಸಿ ತಾಣಗಳು, ಜಿಲ್ಲಾಕೇಂದ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವವರೇ ಇಲ್ಲದ್ದನ್ನು ಕಂಡಾಗ ಸೋಂಕು ಹೆಚ್ಚುವ ಕಳವಳ ಪ್ರಜ್ಞಾವಂತರಲ್ಲಿ ಮನೆ ಮಾಡಿದೆ.

ಇನ್ನಾದರೂ ಜಿಲ್ಲಾಡಳಿತ ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಪಾಠ ಮಾಡಬೇಕಿದ್ದು ಕೊರೊನಾ ಸೋಂಕು ಮುಕ್ತ ಚಾಮರಾಜನಗರ ಎಂಬ ಹೆಮ್ಮೆಗೆ ಜಿಲ್ಲೆ ಮತ್ತೆ ಪಾತ್ರವಾಗಲು ಶ್ರಮಿಸಬೇಕಿದೆ.

Last Updated : Mar 27, 2021, 11:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.