ಚಾಮರಾಜನಗರ: ನೂತನ ವರ್ಷಾಚರಣೆಗಾಗಿ ಜಿಲ್ಲೆಯ ಹಲವೆಡೆ ಬಾರ್ಗಳ ಮುಂದೆ ಜನರು ಜಮಾಯಿಸಿ, ಮದ್ಯ ಖರೀದಿಸಿದ್ದಾರೆ. ಜನರ ದಂಡು ಬಾರ್ಗಳತ್ತ ಮುಖ ಮಾಡಿದ್ದು, ರಾತ್ರಿ 11 ಬಳಿಕ ಕೆಲವರು ನಗರದ ರಸ್ತೆಗಳಲ್ಲಿ ಜಾಲಿ ರೈಡ್ ಮಾಡಿದ್ದಾರೆ.
ತಾಲೂಕು ಕಚೇರಿ ಸುತ್ತಮತ್ತ ಕೆಲವರು ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು. ನಗರದ ಜೋಡಿ ರಸ್ತೆ, ಪಚ್ಚಪ್ಪ ವೃತ್ತ ಹಾಗೂ ಸತ್ಯಮಂಗಲಂ ರಸ್ತೆಗಳಲ್ಲಿ ಕೆಲವರು ತಿರುಗಾಡುತ್ತಿರುವುದು ಕಂಡುಬಂತು.
ಹತ್ತಾರು ಬೇಕರಿಗಳಲ್ಲಿ ಹೊಸ ವರ್ಷಾಚರಣೆಯ ವಿಶೇಷ ಕೇಕ್ಗಳ ಮಾರಾಟವೂ ಜೋರಾಗಿತ್ತು. ಇದರೊಟ್ಟಿಗೆ, ಮಾಂಸಹಾರಿ ಹೋಟೆಲ್ಗಳಲ್ಲಿ ಜನರು ಕಿಕ್ಕಿರಿದು ಆಹಾರ ಖರೀದಿಸಿ ಪಾರ್ಟಿ ಮೂಡ್ನಲ್ಲಿದ್ದರು.
ಸಫಾರಿ ಜೋರು: 2021ರ ಕೊನೆಯ ದಿನವಾದ ಡಿಸೆಂಬರ್ 31ರಂದು ಬಂಡೀಪುರ ಸರ್ಕಾರಿ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಇದ್ದುದ್ದರಿಂದ ಪ್ರವಾಸಿಗರು ಸಫಾರಿಗೆ ಮೊರೆ ಹೋದರು.
![New year in chamarajanaga](https://etvbharatimages.akamaized.net/etvbharat/prod-images/14063780_.png)
ಸಫಾರಿಗೆ ಪ್ರವಾಸಿಗರ ದಂಡೇ ಹರಿದುಬಂದಿದೆ. ಕಳೆದ ಒಂದು ವಾರದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಫಾರಿ ನಡೆಸಿದ್ದು, ಅರಣ್ಯ ಇಲಾಖೆಗೆ ಬರೋಬ್ಬರಿ 22 ಲಕ್ಷ ರೂ. ಆದಾಯ ಹರಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ: ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ