ETV Bharat / state

ಜಾರಕಿಹೊಳಿ, ಮುನಿರತ್ನ ಅವ್ರಿಗೆ ಶೀಘ್ರವೇ ಸಚಿವ ಪಟ್ಟ: ನಾರಾಯಣಗೌಡ ಪುನರುಚ್ಚಾರ

ರಮೇಶ್ ಜಾರಕಿಹೊಳಿ ಅವರು ಆರೋಪ ಮುಕ್ತರಾಗುತ್ತಾರೆ. ರಮೇಶ್​ ಜಾರಕಿಹೊಳಿ, ಮುನಿರತ್ನ ಅವರು ಶೀಘ್ರವೇ ಸಚಿವರಾಗುತ್ತಾರೆ. ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

narayanagowda
ಸಚಿವ ಡಾ ನಾರಾಯಣಗೌಡ
author img

By

Published : Jun 30, 2021, 6:42 PM IST

ಚಾಮರಾಜನಗರ: ರಮೇಶ್ ಜಾರಕಿಹೊಳಿ ಮತ್ತು ಮುನಿರತ್ನ ಶೀಘ್ರವೇ ಸಚಿವರಾಗುತ್ತಾರೆಂದು ಸಚಿವ ಡಾ. ನಾರಾಯಣಗೌಡ ಪುನರುಚ್ಚರಿಸಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಮೇಶ್ ಜಾರಕಿಹೊಳಿ ಅವರು ಆರೋಪ ಮುಕ್ತರಾಗುತ್ತಾರೆ. ರಮೇಶ್​ ಜಾರಕಿಹೊಳಿ, ಮುನಿರತ್ನ ಅವರು ಶೀಘ್ರವೇ ಸಚಿವರಾಗುತ್ತಾರೆ. ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ. ಅವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಡಾ ನಾರಾಯಣಗೌಡ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾತನಾಡಿ, ಹೈನುಗಾರರ, ರೈತ ಮಹಿಳೆಯರ ಶ್ರಮದ ಹಣವನ್ನು ಲಪಟಾಯಿಸಿದವರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಹಗರಣದ ಹಿಂದೆ ದೊಡ್ಡವರಿರಲಿ, ಚಿಕ್ಕವರಿರಲಿ ಕಠಿಣ ಕ್ರಮವಂತೂ ತೆಗೆದುಕೊಳ್ಳುತ್ತೇವೆ. ತನಿಖೆ ನಡೆಯುತ್ತಿದ್ದು, ಲಾರಿ ಚಾಲಕರ ಜೊತೆ ನಿರ್ದೇಶಕರು ಭಾಗಿಯಾಗಿದ್ದಾರೆಂಬುದು ಇನ್ನು ಗೊತ್ತಿಲ್ಲ. ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ. ಸೂಪರ್ ಸೀಡ್ ಮಾಡಿದರೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅವರುಗಳೇ ಮುಂದುವರೆಯುವುದರಿಂದ ಸೂಪರ್ ಸೀಡ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಶಾಸಕರ ಹಕ್ಕುಚ್ಯುತಿ ಕುರಿತು ಯತ್ನಾಳ್ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ

ಇನ್ನೂ ಯತ್ನಾಳ್ ಹಾಗೂ ಸಿ.ಪಿ.ಯೋಗೇಶ್ವರ್ ಅವರ ಇಂದಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.