ETV Bharat / state

ಶಾಲೆಯ ಹೆಸರೇ ಇಲ್ಲಿನ ಮಕ್ಕಳಿಗೆ ಸಮಸ್ಯೆ: 8 ದಿನಗಳಿಂದ ತರಗತಿ ಬಹಿಷ್ಕಾರ! - ಚಾಮರಾಜನಗರ ಶಾಲೆಯ ಹೆಸರಿನ ವಿವಾದದ ಸುದ್ದಿ

ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ಮೈಸೂರಪ್ಪನ ದೊಡ್ಡಿಯ ಬದಲಾಗಿ ಹೊಸದೊಡ್ಡಿ ಎಂದು ಹೆಸರು ಹಾಕಬೇಕೆಂದು ಒತ್ತಾಯಿಸಿ, ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಲೆ ಬಹಿಷ್ಕರಿಸಿರುವ ಘಟನೆ ನಡೆದಿದೆ.

name of the school is a problem for the children
ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ
author img

By

Published : Jun 8, 2022, 8:07 PM IST

ಚಾಮರಾಜನಗರ: ಶಾಲೆಯ ಹೆಸರು ಬದಲಾಗಿದ್ದಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಕಳೆದ 8 ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೇ, ಶಾಲೆಯನ್ನು ಬಹಿಷ್ಕರಿಸಿರುವ ಘಟನೆ ಹನೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ಮೈಸೂರಪ್ಪನ ದೊಡ್ಡಿಯ ಬದಲಾಗಿ ಹೊಸದೊಡ್ಡಿ ಎಂದು ನಮೂದಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಶಾಲೆಗೆ ತೆರಳದೇ ತರಗತಿ ಬಹಿಷ್ಕರಿಸಿದ್ದು, ಇದನ್ನು ಪಾಲಕರು ಸಹ ಬೆಂಬಲಿಸಿದ್ದಾರೆ.

ಪಿ ಜಿ ಪಾಳ್ಯ ಗ್ರಾಮ ಪಂಚಾಯತ್​ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿಯಲ್ಲಿ ಈ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ದಾಖಲಾಗದ ಪರಿಣಾಮ ಶಾಲೆಯನ್ನು 40 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು. ನಂತರ ಈ ಶಾಲೆಯನ್ನು ಹೊಸದೊಡ್ಡಿ ಗ್ರಾಮಕ್ಕೆ ಸ್ಥಳಾಂತರಿಸುವುದರ ಮೂಲಕ ಇಲ್ಲಿನ ವಿದ್ಯಾರ್ಥಿಗಳನ್ನು ಹೊಸದೊಡ್ಡಿ ಶಾಲೆಗೆ ವರ್ಗಾಯಿಸಲಾಗಿತ್ತು. ವರ್ಗಾಯಿಸಿ 35 ವರ್ಷಗಳು ಕಳೆದರೂ ಸಹ ಶಾಲೆಯ ಹೆಸರನ್ನು ಮೈಸೂರಪ್ಪನ ದೊಡ್ಡಿ ಗ್ರಾಮವೆಂದೇ ನಾಮಫಲಕ ಹಾಕಲಾಗಿದೆ. ಇದರಿಂದ ಬೇಸತ್ತ ಹೊಸದೊಡ್ಡಿ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಲೆಯನ್ನೇ 8 ದಿನಗಳಿಂದ ಬಹಿಷ್ಕರಿಸಿ ಆಕ್ರೋಶ ಹೊರಹಾಕಿದ್ದಾರೆ.

ಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಹೊಸದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ

ಈ ಶಾಲೆಯಲ್ಲಿ 1 ತರಗತಿಯಿಂದ 5ನೇ ತರಗತಿಯವರೆಗೆ 11 ವಿದ್ಯಾರ್ಥಿಗಳು ಕಲಿಯುತ್ತಿದ್ದು, 11 ವಿದ್ಯಾರ್ಥಿಗಳು ಕೂಡ ಶಾಲೆಗೆ ಬರದೇ ತರಗತಿ ಬಹಿಷ್ಕರಿಸಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಬಾರದ ಹಿನ್ನೆಲೆ ಶಿಕ್ಷಕರು ಪೋಷಕರ ಮನವೊಲಿಸಲು ಮುಂದಾದರೂ ಮಕ್ಕಳು, ಪಾಲಕರು ಇದಕ್ಕೆ ಬಗ್ಗಿಲ್ಲ.

ನೇಮ್ ಪಾಲಿಟಿಕ್ಸ್: ಹೊಸದೊಡ್ಡಿ ಶಾಲೆ ಎಂದು ಬದಲಿಸಬೇಕೆಂದು ಒಂದು ಬಣ ಒತ್ತಾಯಿಸುತ್ತಿದ್ದು, ಮತ್ತೊಂದು ಬಣ ಮೈಸೂರಪ್ಪನ ದೊಡ್ಡಿ ಅಂತಲೇ ಇರಬೇಕು ಎಂದು ಹೇಳುತ್ತಿದೆ. 40 ವರ್ಷಗಳಿಂದ ಇರುವ ಹೆಸರನ್ನು ಬದಲಿಸಿದರೇ ಕೋರ್ಟ್​ಗೆ ಹೋಗುತ್ತೇವೆಂದು ಮತ್ತೊಂದು ಬಣ ಎಚ್ಚರಿಸಿರುವುದು ಹನೂರು ಬಿಇಒ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬಾಲಕನ ‌ಕಿಡ್ನಾಪ್​ ಪ್ರಕರಣ ಸುಖಾಂತ್ಯ.. ಹೇಗಿತ್ತು ಗೊತ್ತಾ ಪೊಲೀಸರ ಸಿನಿಮಾ ಶೈಲಿಯ ಕಾರ್ಯಾಚರಣೆ?

ಮೈಸೂರಪ್ಪನದೊಡ್ಡಿ ಎಂಬ ಹೆಸರಿನ ಮುಂದೆ ಬ್ರಾಕೆಟ್​​ನಲ್ಲಿ ಹೊಸದೊಡ್ಡಿ ಎಂದು ನಮೂದಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳುತ್ತಿದ್ದರೂ, ಒಂದು ಬಣ ಒಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ಕೆಲವರು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದು, ಈ ನೇಮ್ ಪಾಲಿಟಿಕ್ಸ್ ಪ್ರತಿಷ್ಟೆಯಾಗಿ ಬದಲಾಗಿದೆ.

ಮಕ್ಕಳ ಆಯೋಗಕ್ಕೆ ಪತ್ರ: ಈ ಸಂಬಂಧ ಹನೂರು ಬಿಇಒ ಸ್ವಾಮಿ ಪ್ರತಿಕ್ರಿಯಿಸಿ, ಕಳೆದ ಒಂದು ವಾರದಿಂದಲೂ ಮನವೊಲಿಸಿದರೂ ಯಾವುದೇ ಫಲ ಕಂಡಿಲ್ಲ. ಇದೇ ರೀತಿ 3-4 ದಿನ ಮುಂದುವರೆದರೇ ಮಕ್ಕಳ ಆಯೋಗಕ್ಕೆ ಪತ್ರ ಬರೆಯಲಾಗುವುದು. ಏಕಾಏಕಿ ಶಾಲೆ ಹೆಸರನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.