ETV Bharat / state

'ಅಪ್ಪು' ಅಭಿಮಾನಕ್ಕೆ ಸಾಕ್ಷಿ ಈ ಊರು: ಇಲ್ಲಿ ಎಲ್ಲರ ಕೈಯಲ್ಲೂ ಪವರ್​ಸ್ಟಾರ್​ ಟ್ಯಾಟೂ, ಮನೆಯಲ್ಲಿ ಫೋಟೋ

ನಲ್ಲೂರು ಮೋಳೆ ಗ್ರಾಮದ ಮನೆ-ಮನಗಳಲ್ಲಿ ರಾಜ್​ ಕುಟುಂಬ ಸದಾ ನೆಲೆಸಿದೆ. ಗ್ರಾಮದಲ್ಲಿರುವ ಅನೇಕ ಯುವಕರು ಅಪ್ಪು ಮತ್ತು ಶಿವಣ್ಣನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ, ಅಪ್ಪು ಕಟೌಟ್ ಮುಂದೆ ಈ ಊರಿನ ಯುವಕರು 11 ದಿನವೂ 24 ತಾಸು ದೀಪ ಹಚ್ಚಿಟ್ಟು. ಊಟವನ್ನು ತ್ಯಜಿಸಿದ್ದರು.

nalluru-mole-village-puneeth-rajkumar-fans-tattoo
ಅಪ್ಪು ಅಭಿಮಾನ
author img

By

Published : Nov 9, 2021, 11:47 AM IST

ಚಾಮರಾಜನಗರ: ಸಿನಿಮಾ ಹಿರೋಗಳಿಗೆ ಆ ಊರಲ್ಲಿ ಒಂದು ನಾಲ್ಕೈದು ಜನ ಫ್ಯಾನ್ಸ್​, ಈ ಊರಲ್ಲಿ ಐದಾರು ಜನ ಫ್ಯಾನ್ಸ್​ ಇರೋದು, ನೋಡಿರ್ತಿವಿ. ಆದ್ರೆ ಇಲ್ಲೊಂದು ಊರಲ್ಲಿ ಪ್ರತಿ ಮನೆಯಲ್ಲಿ ಪುನೀತ್ ರಾಜ್‍ಕುಮಾರ್, ಶಿವಣ್ಣನ ಭಾವಚಿತ್ರ ವಿದೆ. ಅಷ್ಟೇ ಅಲ್ಲ ಟಿವಿಯಲ್ಲಿ ಅಣ್ಣಾವ್ರು ಇಲ್ಲವೇ ಅಪ್ಪು-ಶಿವಣ್ಣ ಚಿತ್ರ ಬಂತೆಂದರೆ ಸಾಕು ಕೆಲಸ-ಕಾರ್ಯ ಬಿಟ್ಟು ಎಲ್ಲರೂ ಟಿವಿ ಮುಂದೆ ಕುಳಿತು ಸಿನಿಮಾ ನೋಡ್ತಾರೆ.

ಅಪ್ಪು ಅಭಿಮಾನಕ್ಕೆ ಸಾಕ್ಷಿ ಈ ಊರು

ಹೌದು, ತಾಲೂಕಿನ ನಲ್ಲೂರು ಮೋಳೆ ಎಂಬ ಊರಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಗಳಿದ್ದಾರೆ. ಇಲ್ಲಿ ಬಹುಪಾಲು ಯುವಕರ ಕೈ ಮತ್ತು ಎದೆಯಲ್ಲಿ ಪವರ್ ಸ್ಟಾರ್, ಅಪ್ಪು, ಪುನೀತ್, ಅಣ್ಣಾವ್ರು, ಅಣ್ಣಾಬಾಂಡ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ‌‌. ಮೊಬೈಲ್​ನಲ್ಲೂ ಅಪ್ಪುದೇ ರಿಂಗ್ ಟೋನ್, ಫೋನ್ ಕೇಸಲ್ಲೂ ಪುನೀತ್ ಭಾವಚಿತ್ರ ರಾರಾಜಿಸುತ್ತದೆ. ಒಟ್ಟಿನಲ್ಲಿ ನಲ್ಲೂರು ಮೊಳೆ ಹೋಗಿ ಅಪ್ಪು ಊರಾಗಿದೆ ಅಂದ್ರೆ ತಪ್ಪಿಲ್ಲ.

ಅಪ್ಪು ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕಟೌಟ್ ಮುಂದೆ ಈ ಊರಿನ ಯುವಕರು 11 ದಿನವೂ 24 ತಾಸು ದೀಪ ಹಚ್ಚಿಟ್ಟಿದ್ದರು. ಕೆಲವರು ಊಟ ಮಾಡುವುದನ್ನೇ ನಿಲ್ಲಿಸಿ ನಿಧನದ ಕೊರಗಲ್ಲೇ ಇರುವುದು ಇವರ ಅಭಿಮಾನದ ವೈಖರಿಗೆ ಸಾಕ್ಷಿಯಾಗಿದೆ.

nalluru mole village puneeth rajkumar fans tattoo
ಕೇಶಮುಂಡನ ಮಾಡಿಸಿದ ಪುನೀತ್​ ಅಭಿಮಾನಿ

ಕೇಶಮುಂಡನ: ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ತಿಥಿ ಕಾರ್ಯದ ಹಿನ್ನೆಲೆಯಲ್ಲಿ ಗ್ರಾಮದ ಮೋಹನ್ ಕುಮಾರ್ ಎಂಬ ಅಭಿಮಾನಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಜೊತೆಗೆ, ಅವರಂತೆ ನೇತ್ರದಾನ ಮಾಡುವ ವಾಗ್ದಾನವನ್ನು ಮಾಡಿ ಗಮನ ಸೆಳೆದಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.