ETV Bharat / state

ಸಮ್ಮಿಶ್ರ ಸರ್ಕಾರದ ಜೋಡೆತ್ತುಗಳು ಒಂಟೆತ್ತುಗಳಾಗಿ ಓಡಾಡ್ತಿವೆ: ಕಟೀಲ್ ವ್ಯಂಗ್ಯ

ಸಮ್ಮಿಶ್ರ ಸರ್ಕಾರದ ಜೋಡೆತ್ತುಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಒಂಟೆತ್ತುಗಳಾಗಿ ತಿರುಗಾಡ್ತಿವೆ. ಒಂದು ಎತ್ತು ನೋಡಿದ್ರೆ, ಮತ್ತೊಂದು ಎತ್ತು ಓಡಿಸಿಕೊಂಡು ಬರ್ತಿದೆ. ಒಂದು ಮತ್ತೊಂದನ್ನು ಓಡಿಸಿಕೊಂಡು ಊರೆಲ್ಲಾ ತಿರುಗುತ್ತಿದೆ ಎಂದು ವ್ಯಂಗ್ಯವಾಡಿದರು.

nalin kumar kateel
ನಳೀನ್ ಕುಮಾರ್ ಕಟೀಲ್
author img

By

Published : Oct 15, 2020, 10:25 PM IST

ಚಾಮರಾಜನಗರ: ಸಮ್ಮಿಶ್ರ ಸರ್ಕಾರದ ಜೋಡೆತ್ತುಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಒಂಟೆತ್ತುಗಳಾಗಿ ತಿರುಗಾಡ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಇಂದು ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜೋಡೆತ್ತುಗಳು ಬೇರೆ ಬೇರೆ ದಾರಿ ಹುಡುಕಿ, ಬೇರೆ ಆಗಿವೆ. ಒಂದು ಎತ್ತು ನೋಡಿದ್ರೆ, ಮತ್ತೊಂದು ಎತ್ತು ಓಡಿಸಿಕೊಂಡು ಬರ್ತಿದೆ. ಒಂದು ಮತ್ತೊಂದನ್ನು ಓಡಿಸಿಕೊಂಡು ಊರೆಲ್ಲಾ ತಿರುಗುತ್ತಿದ್ದು ಉಪ ಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದ ಜೋಡೆತ್ತುಗಳು ಒಂಟೆತ್ತುಗಳಾಗಿ ಓಡಾಡ್ತಿವೆ: ಕಟೀಲ್ ವ್ಯಂಗ್ಯ

ರಾಜಕೀಯ ದ್ವೇಷದಿಂದ ಐಟಿ, ಸಿಬಿಐ ದಾಳಿ ನಡೆಯುತ್ತಿದೆ ಎಂದು ಹೇಳಿರುವ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿ, ಎಲ್ಲವನ್ನೂ ರಾಜಕಾರಣ ದೃಷ್ಟಿಯಿಂದ ನೋಡಬಾರದು. ಸಿಬಿಐ ವಿಚಾರಣೆ ನಡೆದರೇ ರಾಜಕಾರಣ, ಐಟಿ ದಾಳಿಯಾದರೇ ರಾಜಕಾರಣ, ಘಟಾನುಘಟಿ ರಾಜಕಾರಣಿಗಳ ಮೇಲೆ ಐಟಿ, ಸಿಬಿಐ ದಾಳಿಯಾಗಿದೆ. ಹಾಗಾದರೆ, ಇದನ್ನೆಲ್ಲಾ ಇವರೇ ದಾಳಿ ಮಾಡಿಸಿದ್ರಾ? ಈ ದೇಶದ ಕಾನೂನಿಗೆ ಗೌರವ ಕೊಡಬೇಕು. ಕಾಮಾಲೆ ದೃಷ್ಟಿಯಿಂದ ನೋಡಿದರೆ ಇದೇ ರೀತಿ ಕಾಣಲಿದೆ, ಸಿದ್ದರಾಮಯ್ಯ ಕೂಡ ರಾಜಕಾರಣ ದೃಷ್ಟಿಯಿಂದ ಹಾಗೆ ಮಾಡಿದ್ದಾರೆ, ಈಗಲೂ ಅವರಿಗೆ ಅದೇ ರೀತಿ ಕಾಣ್ತಿದೆ ಎಂದು ಟಾಂಗ್ ನೀಡಿದರು.

ಬಿಜೆಪಿ ಲೂಟಿ ಸರ್ಕಾರವೆಂದು ಸಿದ್ದರಾಮಯ್ಯ ಹೇಳಿಕೆಗೆ ಇದೇ ವೇಳೆ ಪ್ರತ್ಯುತ್ತರ ನೀಡಿ, ಅರ್ಕಾವತಿ ಪ್ರಕರಣ ಕೂಡ ಅವರ ಕಾಲದಲ್ಲಿ ನಡೆದಿದೆ, PWDಯಲ್ಲಿ ಎಷ್ಟೆಷ್ಟು ಪರ್ಸೆಂಟ್ ತೆಗೆದುಕೊಂಡಿದ್ದರು ನೋಡಲಿ, ಸಿದ್ದರಾಮಣ್ಣ ಸರ್ಕಾರ ಲೂಟಿ ಸರ್ಕಾರ ಅಂತಾ ಜಗಜ್ಜಾಹೀರಾಗಿದೆ ಎಂದು ಅವರು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.