ಚಾಮರಾಜನಗರ: ಅತ್ತಿಗೆ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ ಶಾಸಕ ಎನ್.ಮಹೇಶ್ ಅವರಿಗೆ ಸಂತೆಯ ದರ್ಶನವಾಯಿತು. ಜೊತೆಗೆ ವೈದ್ಯರ ಗೈರು ಹಾಜರಿ ಎದ್ದು ಕಂಡಿತು. ಇದರಿಂದ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಕಾಲುನೋವು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯ ಆರೋಗ್ಯ ವಿಚಾರಿಸಲು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ತೆರಳಿದ್ದ ಶಾಸಕರಿಗೆ, ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ಅಶಿಸ್ತು ಮತ್ತು ಸಮವಸ್ತ್ರ ಧರಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಗೈರಾಗಿದ್ದ ವೈದ್ಯರಿಗೆ ನೋಟಿಸ್ ನೀಡಬೇಕು, ಕೆಲಸ ಮಾಡದ ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಿ ಎಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆ ಸಂತೆ ರೀತಿ ಇದೆ. ಶಿಸ್ತು-ಸ್ವಚ್ಛತೆ ಎನ್ನುವುದಿಲ್ಲ. ಜನರು ನೀಡುತ್ತಿದ್ದ ದೂರುಗಳ ನಿಜದರ್ಶನವಾಗಿದೆ. ಇದೇ ಕೊನೆ, ಇನ್ಮುಂದೆ ಆಸ್ಪತ್ರೆಯಲ್ಲಿ ಅಶಿಸ್ತು ಇರಬಾರದು ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಆಸ್ಪತ್ರೆಯ ಸಿಬ್ಬಂದಿ ಸಮವಸ್ತ್ರ ಧರಿಸಬೇಕು, ಶಿಸ್ತಿನಿಂದ ಜನರೊಂದಿಗೆ ವರ್ತಿಸಬೇಕು. ಇಲ್ಲದಿದ್ದರೆ ಸರಿ ಮಾಡುವುದು ಹೇಗೆ ಎಂದು ತಿಳಿದಿದೆ ಎಂದು ವೈದ್ಯರ ಅಸಡ್ಡೆಗೆ ಕಿಡಿಕಾರಿದರು.