ಚಾಮರಾಜನಗರ: ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮೇಯರ್ ಸ್ಥಾನ ಕೈ ತಪ್ಪಲು ಧ್ರುವನಾರಾಯಣ ಅವರ ವೈಫಲ್ಯವೇ ಕಾರಣ ಎಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಮಹಾದೇವಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಾಧ್ಯಕ್ಷರನ್ನಾಗಿ ಮಾಡಿ, ಚುನಾವಣೆ ವೀಕ್ಷಕನಾಗಿ ನೇಮಿಸಿ ಮೇಯರ್ ಮಾಡಿಕೊಂಡು ಬನ್ನಿ ಎಂದರೆ ಧ್ರುವನಾರಾಯಣ ವೈಫಲ್ಯದಿಂದ ಮೇಯರ್ ಗಿರಿ ಅವರ ಕೈ ತಪ್ಪಿತು ಎಂದು ಧ್ರುವ ವಿರುದ್ಧ ಲೇವಡಿ ಮಾಡಿದರು.
ಕಾಂಗ್ರೆಸ್ನವರಿಗೆ ಸಿದ್ದರಾಮಯ್ಯ ಹುಲಿಯಾದರೆ, ಪ್ರತಾಪ್ ಸಿಂಹ ಅವರು ಕೂಡ ನಮ್ಮ ನಾಯಕರು, ಅವರು ಕೂಡ ಹುಲಿ. ಪ್ರತಾಪ್ ಅವರಂತೆ ಕೆಲಸ ಮಾಡಿದರೆ ಎಲ್ಲ ಜಿಲ್ಲೆಗಳು ಮಾದರಿ ಆಗಲಿವೆ. ಆದರೆ ಧ್ರುವನಾರಾಯಣ ಅವರ ಗುರುತರ ಸಾಧನೆ ಏನು ಎಂದು ಪ್ರಶ್ನಿಸಿದರು.
ಓದಿ:ಮೀಸಲಾತಿ ಇಲ್ಲದಿದ್ದರೇ ಯಾರಾದರೂ ಗೌಡ್ರ ಮನೆಯಲ್ಲಿ ಜೀತಕ್ಕಿರುತ್ತಿದ್ದೆ : ಮಾಜಿ ಸಂಸದ ಶಿವಣ್ಣ
ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಕೊಟ್ಟಂತೆಯೇ ನಮಗೂ ಅನುದಾನ ಕೊಡುತ್ತಾರೆ. ಕೇಂದ್ರ ಸರ್ಕಾರವೇನೂ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ. ಬೆಲೆ ಏರಿಕೆಯೂ ಶೀಘ್ರ ತಹಬದಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.