ETV Bharat / state

ನಿರ್ದಿಷ್ಟ ಕ್ಷೇತ್ರ ಘೋಷಿಸದ ಸಿದ್ದರಾಮಯ್ಯ ಅಂಜುಬುರುಕ, ರಾಜಕೀಯ ಅಲೆಮಾರಿ: ಸಂಸದ ಶ್ರೀನಿವಾಸ್ ಪ್ರಸಾದ್ - ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಒಂದು ಊರಲ್ಲಿ ನಿಲ್ಲದ ಅಲೆಮಾರಿಗಳಂತೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ ಇದ್ದಂತೆ- ಸಂಸದ ಶ್ರೀನಿವಾಸ್ ಪ್ರಸಾದ್

MP Srinivas Prasad
ಸಂಸದ ಶ್ರೀನಿವಾಸ್ ಪ್ರಸಾದ್
author img

By

Published : Nov 9, 2022, 2:26 PM IST

ಚಾಮರಾಜನಗರ: ಸಿದ್ದರಾಮಯ್ಯ ರಾಜಕೀಯ ಅಲೆಮಾರಿ. ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ ಮಾಡದ ಅಂಜುಬುರುಕ ಎಂದು ಸಂಸದ ವಿ‌. ಶ್ರೀನಿವಾಸ್​ ಪ್ರಸಾದ್ ಲೇವಡಿ ಮಾಡಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಊರಲ್ಲಿ ನಿಲ್ಲದ ಅಲೆಮಾರಿಗಳಂತೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ ಇದ್ದಂತೆ. ಉಪಕಾರ ಸ್ಮರಣೆ ಇಲ್ಲದ ಸಿದ್ದರಾಮಯ್ಯ ಪಕ್ಷ ಕಟ್ಟಲಿ. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಅಗತ್ಯ ಇದೆ. ಅದು ಬಿಟ್ಟು ವೀರಾವೇಶದ ಮಾತಾಡುತ್ತಾರೆ. ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 8 ಲಕ್ಷ ಜನ ಟಾನಿಕ್ ಕೊಟ್ಟಿದ್ದಾರೆ. ಹೀಗಾದರೂ ತಾವು ನಿಲ್ಲುವ ಕ್ಷೇತ್ರ ಘೋಷಣೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಖರ್ಗೆ ಅಭಿನಂದನಾ ಸಮಾರಂಭದಲ್ಲಿ ಟೇಬಲ್ ಕುಟ್ಟಿ ಮಾತನಾಡುತ್ತಾರೆ. ಅವರು ಗೆದ್ದಿರುವುದು ಒಂದು ಸ್ಥಾನ. ಇನ್ನು ಬಿಜೆಪಿ 25 ಸಂಸದ ಸ್ಥಾನ ಗೆದ್ದಿದ್ದು ನಾವು ಯಾವ ರೀತಿ ಮಾತನಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಂದಿನ ಸಿಎಂ ಎಂದು ಮಣ್ಣು ಮುಕ್ಕಿದ್ದಾರೆ. ರಾಹುಲ್ ಗಾಂಧಿ ಪಿಎಂ ಎಂದು ರಾಯಚೂರಲ್ಲಿ ಹೇಳಿದ್ದರು. ಆದರೆ ಈಗ ಏನಾಯಿತು?. ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೊನೆಗೊಂಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಅಲ್ಲಿಗೇ ಹೋಗಿಲ್ಲ. ತೆಲಂಗಾಣದಲ್ಲಿ ಅವರ ಯಾತ್ರೆಗೆ ಜನರೇ ಇರಲಿಲ್ಲ ಎಂದು ಕುಟುಕಿದರು.

ಇದೇ ವೇಳೆ, ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿ ಜೊತೆಗೆ ಕಾಂಗ್ರೆಸ್ ನಾಯಕರು ಕೂಡ ಅವರ ಮಾತನ್ನು ಒಪ್ಪಲು ತಯಾರಿಲ್ಲ. ಕ್ಷಮೆ ಕೇಳಿ ಅಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಆದರೆ ಕ್ಷಮೆ ಕೇಳಲ್ಲ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ... ಭಾವುಕರಾಗಿ ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.