ETV Bharat / state

ಜೆಡಿಎಸ್​​ನದ್ದು ಕುಟುಂಬಸ್ಥರ ನವರತ್ನ ಕಾರ್ಯಕ್ರಮ.. ಸಿದ್ದರಾಮಯ್ಯ ಮಜಾರಾಮಯ್ಯ: ಸಂಸದ ಶ್ರೀನಿವಾಸ್ ಪ್ರಸಾದ್ - ಸಿದ್ದರಾಮಯ್ಯ ಮಜಾರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್​ ವಿರುದ್ಧ ಚಾಮರಾಜನಗರ ಸಂಸದ ವಿ ಶ್ರೀನಿವಾಸ್​ ಪ್ರಸಾದ್ ವಾಗ್ದಾಳಿ ನಡೆಸಿದ್ರು.

mp-shrinivas-prasad-slams-siddaramaih
ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್
author img

By

Published : May 7, 2023, 8:03 PM IST

ಚಾಮರಾಜನಗರ ಸಂಸದ ವಿ ಶ್ರೀನಿವಾಸ್​ ಪ್ರಸಾದ್ ಹೇಳಿಕೆ

ಚಾಮರಾಜನಗರ : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇನ್ನೂ ಅಧಿಕಾರದ ಅಮಲು ಇಳಿದಿಲ್ಲ ಎಂದು ಚಾಮರಾಜನಗರ ಸಂಸದ ವಿ ಶ್ರೀನಿವಾಸ್​ ಪ್ರಸಾದ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬರೀ ಮಜಾ ಮಾಡಿದರು.‌ ಈಗ, ಮತ್ತೆ ನಾನು‌ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಇವರು ಮುಖ್ಯಮಂತ್ರಿ ಆಗಿ ಸೋಲಲಿಲ್ಲವೇ, ಇವರ ಜೊತೆಗೆ ಎಚ್.ಸಿ‌. ಮಹಾದೇವಪ್ಪ ಸೋಲಲಿಲ್ಲವೇ ಎಂದು ಟೀಕಿಸಿದರು.

ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದು ನಾನು. ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ. ಪರಮೇಶ್ವರ್ ಸೋತಿದ್ದರಿಂದ ಮತ್ತು ಖರ್ಗೆ ಅವರು ದೆಹಲಿ ರಾಜಕಾರಣಕ್ಕೆ ಹೋಗಿದ್ದರಿಂದ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದೆವು. ಆದರೆ ಸಿದ್ದರಾಮಯ್ಯ ನನ್ನನ್ನೇ ಸಂಪುಟದಿಂದ ತೆಗೆದು ಮನಸ್ಸಿಗೆ ದೊಡ್ಡ ಗಾಯ ಮಾಡಿದರು ಎಂದು ಅಸಮಾಧಾನ ಮಾಡಿದರು.

ಇದನ್ನೂ ಓದಿ : ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕು : ಶೋಭಾ ಕರಂದ್ಲಾಜೆ ಆಗ್ರಹ

ಸಿದ್ದರಾಮಯ್ಯ ಯಾವುದೇ ಹೋರಾಟ ಮಾಡದ ವ್ಯಕ್ತಿ. ಹೋರಾಟದ ಹಿನ್ನೆಲೆ ಇಲ್ಲದೇ ಅಧಿಕಾರ ಅನುಭವಿಸಿದವರು. 1980ರಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ನಾನು ಗೆದ್ದಿದ್ದೆ. ಸಿದ್ದರಾಮಯ್ಯ ಮೈಸೂರಿನಲ್ಲಿ 8 ಸಾವಿರ ಮತ ಪಡೆದು ಸೋತಿದ್ದರು. ಚುನಾವಣೆಗೆ ನಿಲ್ಲುವುದು ಅವರಿಗೆ ಒಂದು ರೀತಿ ತೆವಲು ಎಂದು ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.

ಜೆಡಿಎಸ್​ನದ್ದು ನವರತ್ನ ಕಾರ್ಯಕ್ರಮ : ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್​ನವರು ಪಂಚರತ್ನ ಕಾರ್ಯಕ್ರಮ ಎನ್ನುತ್ತಿದ್ದಾರೆ. ಆದರೆ ಅದು ಪಂಚರತ್ನವಲ್ಲ. ಅವರ ಕುಟುಂಬಸ್ಥರೇ ಇರುವ ಅಷ್ಟರತ್ನ ಕಾರ್ಯಕ್ರಮ. ಅಧ್ಯಕ್ಷ ಸಿ.ಎಂ ಇಬ್ರಾಹಿಂ ಸೇರಿ ನವರತ್ನ ಆಗಿದೆ. ಯಾವುದೇ ಚುನಾವಣೆ ಬಂದರೂ ಮನೆಯವರಿಗೇ ಎನ್ನುತ್ತಾರೆ. ಜೆಡಿಎಸ್ ಬಗ್ಗೆ ಮಾತನಾಡುವುದು ಅನಗತ್ಯ ಎಂದು ಹೇಳಿದರು.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅತ್ಯದ್ಭುತವಾಗಿ ಸರ್ಕಾರ ಮಾಡಿದ್ದಾರೆ. ಸೋಮಣ್ಣ ಸೇರಿದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಈ ಬಾರಿ ಗೆಲ್ಲುತ್ತಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ವರುಣ ಕ್ಷೇತ್ರವನ್ನು ಚಿನ್ನದ ತಕ್ಕಡಿಯಲ್ಲಿ ತೂಗುವಂತೆ ಮಾಡಬಹುದಿತ್ತು: ವಿ. ಸೋಮಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.