ಚಾಮರಾಜನಗರ: ನಿದ್ದೆ ಮಾಡುತ್ತಿರುವ ಮರಿಯನ್ನು ಎಚ್ಚರಿಸಬಾರದೆಂಬ ರೀತಿಯಲ್ಲಿ ಮಲಗಿ ನಿದ್ರಿಸುತ್ತಿದ್ದ ಮರಿಯನ್ನು ಅಪ್ಪಿದ ತಾಯಿ ಮಂಗ ಮಳೆಯಲ್ಲಿ ನೆನೆಯುತ್ತಾ ಕುಳಿತುಕೊಂಡಿದ್ದ ಅಪರೂಪದ ಘಟನೆ ಹನೂರು ತಾಲೂಕಿನ ಹೊಗೆನಕಲ್ನಲ್ಲಿ ಕಂಡು ಬಂತು.
ಹೊಗೆನಕಲ್ ಬಸ್ ನಿಲ್ದಾಣ ಸಮೀಪದ ಕಟ್ಟಡ ಮೇಲೆ ನಿದ್ರೆ ಮಾಡುತ್ತಿದ್ದ ಮರಿಯನ್ನು ಹೊತ್ತು ಮಂಗವೊಂದು ಕುಳಿತಿತ್ತು. ಆಗ ದಿಢೀರನೇ ಜೋರು ಮಳೆ ಆರಂಭವಾಯಿತು. ನಿದ್ರೆ ಮಾಡುತ್ತಿದ್ದ ಮರಿಯನ್ನು ಎಚ್ಚರಿಸಬಾರದೆಂಬ ರೀತಿಯಲ್ಲಿ ಎದೆಗಪ್ಪಿಕಪ್ಪಿಕೊಂಡು ಮಳೆಯಲ್ಲೇ ನೆನೆಯುತ್ತಾ ತಾಯಿ ಮಂಗ ಕುಳಿತಿದ ದೃಶ್ಯ ಕಂಡು ಬಂತು. ಇದನ್ನೇ ಗಮನಿಸುತ್ತಿದ್ದ ಲಕ್ಷ್ಮಣ ಎಂಬ ಯುವಕ ಮಂಗನ ವಾತ್ಸಲ್ಯದ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಮಳೆ ನಿಂತ 10-15 ನಿಮಿಷಕ್ಕೆಲ್ಲಾ ಮರಿ ಎಚ್ಚರಗೊಂಡಿದ್ದನ್ನು ಗಮನಿಸಿದ ತಾಯಿ ಕೋತಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಮಾಯವಾಯಿತು ಎಂದು ಲಕ್ಷ್ಮಣ್ ತಿಳಿಸಿದರು. ಜಿಲ್ಲೆಯಲ್ಲಿ ಗುರುವಾರದಿಂದ ಮುಂಗಾರು ಆರಂಭಗೊಂಡಿದೆ. ಇಂದು ಬೆಳಗ್ಗೆಯಿಂದಲೇ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನದಿಂದ ಹಲವೆಡೆ ಜೋರು ಮಳೆಯಾಗುತ್ತಿದೆ.