ಕೊಳ್ಳೇಗಾಲ(ಚಾಮರಾಜನಗರ): ಈ ಹಿಂದೆ ತನ್ನ ಮೊದಲನೇ ಮಗುವಿಗೆ ಆಟೋದಲ್ಲಿ ಜನ್ಮ ನೀಡಿದ್ದ ಮಹಿಳೆ 2ನೇ ಮಗುವಿಗೆ ಆ್ಯಂಬುಲೆನ್ಸ್ನಲ್ಲಿ ಜನ್ಮ ನೀಡಿರುವ ವಿಶೇಷ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಶೇಷಣ್ಣ ಅವರ ಪತ್ನಿ ಜ್ಯೋತಿ ಎಂಬುವರು ತನ್ನ ಎರಡು ಮಕ್ಕಳಿಗೆ ಚಲಿಸುತ್ತಿದ್ದ ವಾಹನದಲ್ಲಿ ಜನ್ಮ ನೀಡಿದ ತಾಯಿ. ಹಿಂದೊಮ್ಮೆ ಮೊದಲ ಮಗುವಿನ ಗರ್ಭಾವಸ್ಥೆಯ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ಆಸ್ಪತ್ರೆಗೆ ಆಟೋದಲ್ಲಿ ತುರ್ತಾಗಿ ಕರೆದೊಯ್ಯುವಾಗ ಆಟೋದಲ್ಲೇ ತನ್ನ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅದರಂತೆ ಎರಡನೇ ಮಗುವಿನ ಗರ್ಭಿಣಿಯಾಗಿದ್ದ ಈಕೆಗೆ ಎರಡು ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕುಟುಂಬಸ್ಥರು ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ರಕ್ತ ಕಡಿಮೆ ಇದ್ದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ಬಳಿಕ ಕೊಳ್ಳೇಗಾಲ ಆಸ್ಪತ್ರೆಗೆ 108 ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಗ ಆ್ಯಂಬುಲೆನ್ಸ್ ವಾಹನದಲ್ಲೇ ಹೆಣ್ಣು ಮಗುವನ್ನು ಹೆತ್ತಿದ್ದಾಳೆ.