ಚಾಮರಾಜನಗರ : ಮಾನಸಿಕ ಅಸ್ವಸ್ಥನೋರ್ವ 20ಕ್ಕೂ ಹೆಚ್ಚು ಶರ್ಟ್ ಹಾಗೂ ಮತ್ತಿತ್ತರ ದಿರಿಸು ಧರಿಸಿದ್ದರಿಂದ ಬೈಕ್ ಗುದ್ದಿದ್ದರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಅಂದಾಜು 50 ವರ್ಷದ ಮಾನಸಿಕ ಅಸ್ವಸ್ಥ ದಿಢೀರನೇ ಬೈಕ್ಗೆ ಅಡ್ಡಲಾಗಿ ಬಂದಿದ್ದರಿಂದ ಸವಾರನೋರ್ವ ಗುದ್ದಿದ್ದಾನೆ. ಕೆಳಗೆ ಬಿದ್ದಿದ್ದ ಆತನನ್ನು ಪರಿಶೀಲಿಸಿದಾಗ ತಲೆಗೆ ಸ್ವಲ್ಪ ತರಚು ಗಾಯಗಳಾಗಿದ್ದು, 20ಕ್ಕೂ ಹೆಚ್ಚು ಬಟ್ಟೆಗಳನ್ನು ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಡೇಂಜರಸ್ ಡ್ರೈವರ್.. ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಬಸ್ ಓಡಿಸಿದ ಚಾಲಕ.. ವಿಡಿಯೋ ನೋಡಿ
ಮಾನವೀಯತೆ ಮೆರೆದ ಪೊಲೀಸ್: ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಾಮರಾಜನಗರ ಗ್ರಾಮಾಂತರ ಠಾಣೆಯ ಶಿವಮೂರ್ತಿ ಅವರು, ಮಾನಸಿಕ ಅಸ್ವಸ್ಥನ ಕೊಳಕು ಬಟ್ಟೆಗಳನ್ನು ತೆಗೆದು ಹೊಸ ಬಟ್ಟೆ ತೊಡಿಸಿ, ಶೇವ್ ಮಾಡಿ ಶುಶ್ರೂಷೆ ಮಾಡಿದ್ದಾರೆ.
ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ಹಿನ್ನೆಲೆ ಮೂಡಲಧ್ವನಿ ವೃದ್ಧಾಶ್ರಮಕ್ಕೆ ಬಿಟ್ಟು ಬರುವ ಮೂಲಕ ಸಾರ್ಥಕ ಕಾರ್ಯ ನಡೆಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ