ಕೊಳ್ಳೇಗಾಲ(ಚಾಮರಾಜನಗರ): ಶಾಸಕ ಎನ್.ಮಹೇಶ್ ತಮ್ಮ ಜನುಮ ದಿನದ ಪ್ರಯುಕ್ತ ಕೊರೊನಾ ವಾರಿಯರ್ಸ್‌ಗೆ ಕೃತಜ್ಞತೆ ಸಮಾರಂಭ ಏರ್ಪಡಿಸಿ,ಪುಷ್ಪವೃಷ್ಠಿ ಮಾಡಿ ಗೌರವ ಸಲ್ಲಿಸಿದ್ದಾರೆ.
ಸರಳವಾಗಿ ಗಿಡ ನೆಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದ ಅವರು, ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕೃತಜ್ಞತಾ ಸಮಾರಂಭ ಏರ್ಪಡಿಸಿ, ಪೌರ ಕಾರ್ಮಿಕರು,ಪೊಲೀಸ್ ಸಿಬ್ಬಂದಿ, ವೈದ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಪುಷ್ಪವೃಷ್ಠಿ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಗೆ ಕೊರೊನಾ ಹರಡದಂತೆ ಇಲ್ಲಿನ ಆಡಳಿತ ವರ್ಗ ಹೆಜ್ಜೆ-ಹೆಜ್ಜೆಗೂ ಎಚ್ಚರವಹಿಸಿ, ಕೆಲಸ ಮಾಡಿದ್ದರಿಂದ ಚಾಮರಾಜನಗರ ಕೊರೊನಾ ಮುಕ್ತವಾಗಿದೆ. ನನ್ನ ಹುಟ್ಟು ಹಬ್ಬದ ಆಚರಣೆಯನ್ನ ಕೊರೊನಾ ವಾರಿಯರ್ಸ್ ಶ್ಲಾಘನೀಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಲು ಮೀಸಲಿಟ್ಟಿದ್ದೇನೆ. ಈ ಮೂಲಕ ಎಲ್ಲರ ಪಾದಕ್ಕೂ ನಮಿಸುತ್ತೇನೆ ಎಂದರು.