ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆಯುವ ರೈತರ ಹೋರಾಟಗಳಿಗೆ ಶಾಸಕ ಸಿ ಎಸ್ ನಿರಂಜನ್ ಕುಮಾರ್ ತಮ್ಮ ಚೇಲಾಗಳ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಆರೋಪಿಸಿದರು.
ಓದಿ: ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್ವೊಂದರಲ್ಲಿ 103 ಮಂದಿಗೆ ಕೊರೊನಾ ಸೋಂಕು
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ರೈತ ಸಂಘದ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಈವರೆಗೆ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಅವ್ಯವಹಾರಗಳ ಕುರಿತು ರೈತ ಸಂಘಟನೆ ಸದಸ್ಯರು ಆರೋಪ ಮಾಡಿದ್ದರು.
ಆರೋಪಗಳ ಕುರಿತು ಪ್ರಬುದ್ಧವಾಗಿ ವರ್ತಿಸಬೇಕಾದ ಶಾಸಕ ನಿರಂಜನ್ ಕುಮಾರ್, ರೈತ ಸಂಘದ ಸದಸ್ಯರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಡೋಂಗಿ ರೈತರು ಎಂದು ಹೇಳಿಕೆ ನೀಡಿದ್ದಾರೆ.
ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರನ್ನು ದೇಶದ್ರೋಹ ಪ್ರಕರಣದಿಂದ ರಕ್ಷಿಸಿದ್ದೇ ರೈತರು. ಇವರು ಬರುವ ಮುನ್ನವೇ ರೈತ ಸಂಘ ಇತ್ತು ಎಂಬುದನ್ನು ಶಾಸಕರು ಮರೆಯಬಾರದು ಎಂದು ಹರಿಹಾಯ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ಶಾಸಕರ ಬಗ್ಗೆ ರೈತರು ಏಕವಚನ ಬಳಸಿಲ್ಲ. ಆದರೆ, ರೈತರು ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದು, ಹೋರಾಟ ನಡೆಸುವ ರೈತರನ್ನು ಡೋಂಗಿ ಎಂದು ಹೇಳಿರುವುದು ಸರಿಯಲ್ಲ. ಗುಂಡ್ಲುಪೇಟೆ ಉಪಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಬಂದರೂ ನೀವು ಚುನಾವಣೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.